ADVERTISEMENT

ಧಾರ್ಮಿಕ ಮತಾಂತರ ಕುರಿತು ಅರ್ಜಿ ಮಾರ್ಚ್ 17ಕ್ಕೆ ‘ಸುಪ್ರೀಂಕೋರ್ಟ್‌’ ವಿಚಾರಣೆ

ಪಿಟಿಐ
Published 6 ಫೆಬ್ರುವರಿ 2023, 14:09 IST
Last Updated 6 ಫೆಬ್ರುವರಿ 2023, 14:09 IST
ಸುಪ್ರೀಂ ಕೋರ್ಟ್ 
ಸುಪ್ರೀಂ ಕೋರ್ಟ್    

ನವದೆಹಲಿ: ಮೋಸದ ಮತಾಂತರ ಮತ್ತು ಅಂತರಧರ್ಮೀಯ ವಿವಾಹಗಳಿಂದಾಗಿ ಧಾರ್ಮಿಕ ಮತಾಂತರಕ್ಕೆ ಒಳಗಾಗಿರುವ ಎರಡು ಪ್ರತ್ಯೇಕ ವಿಷಯಗಳ ಕುರಿತು ವಿವಿಧ ರಾಜ್ಯಗಳ ಕಾನೂನುಗಳ ವಿರುದ್ಧ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 17ರಂದು ನಡೆಸುವುದಾಗಿ ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠವು, ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದು, ಮೋಸದ ಧಾರ್ಮಿಕ ಮತಾಂತರಗಳ ವಿರುದ್ಧದ ಅವರ ಮನವಿಯು ರಾಜ್ಯಗಳ ವಿವಿಧ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಗುಂಪುಗಳಿಗಿಂತ ಭಿನ್ನವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

‘ನಾನು ರಾಜ್ಯಗಳ ಕಾನೂನಿನ ಪರವಾಗಲೀ ಅಥವಾ ವಿರೋಧವಾಗಲೀ ಇಲ್ಲ. ಮೋಸದಿಂದ ಮತಾಂತರ ಮಾಡುವ ಕುರಿತ ಪ್ರತ್ಯೇಕ ವಿಷಯವನ್ನು ನನ್ನ ಅರ್ಜಿಯು ಹೊಂದಿದೆ. ನನ್ನ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು’ ಎಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಕೋರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಅವರು, ‘ಎಲ್ಲ ಅರ್ಜಿಗಳು ನಮ್ಮ ಮುಂದಿವೆ. ಮಾರ್ಚ್ 17ರಂದು ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.