ADVERTISEMENT

ಕೃಷ್ಣ ಜನ್ಮಭೂಮಿ ಬಳಿಯ ಕಟ್ಟಡಗಳ ತೆರವು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಕೃಷ್ಣ ಜನ್ಮಭೂಮಿ ಬಳಿಯ ‘ಅಕ್ರಮ’ ನಿರ್ಮಾಣಗಳ ತೆರವು

ಪಿಟಿಐ
Published 27 ಆಗಸ್ಟ್ 2023, 11:27 IST
Last Updated 27 ಆಗಸ್ಟ್ 2023, 11:27 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ(ಪಿಟಿಐ): ಉತ್ತರ ಪ್ರದೇಶದ ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಸಮೀಪ ಅಕ್ರಮವಾಗಿ ನಿರ್ಮಿಸಿದ್ದು ಎನ್ನಲಾದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ.

ಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಿಚಾರಣಾ ಪಟ್ಟಿ ಕುರಿತ ಮಾಹಿತಿಯಂತೆ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌, ಸಂಜಯಕುಮಾರ್‌ ಹಾಗೂ ಎಸ್‌ವಿಎನ್ ಭಟ್ಟಿ ಅವರಿರುವ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ.

ಕೃಷ್ಣ ಜನ್ಮಭೂಮಿ ಸಮೀಪದಲ್ಲಿನ ಗುಡಿಸಲುಗಳು, ಮನೆಗಳನ್ನು ತೆರವುಗೊಳಿಸಲು ರೈಲ್ವೆಯು ಆರಂಭಿಸಿರುವ ಕಾರ್ಯಾಚರಣೆ ಪ್ರಶ್ನಿಸಿದ ಅರ್ಜಿ ಇದಾಗಿದೆ.

ADVERTISEMENT

ಈ ಕಾರ್ಯಾಚರಣೆಯನ್ನು 10 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಆಗಸ್ಟ್‌ 16ರಂದು ಆದೇಶಿಸಿದ್ದ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರ ಹಾಗೂ ಇತರರಿಗೆ ನೋಟಿಸ್‌ ನೀಡಿತ್ತು.

ಆಗಸ್ಟ್‌ 25ರಂದು ಮತ್ತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಮಧ್ಯಂತರ ಆದೇಶ ವಿಸ್ತರಣೆಗೆ ನಿರಾಕರಿಸಿತ್ತು. ವಿಚಾರಣೆಯನ್ನು ಆಗಸ್ಟ್‌ 28ಕ್ಕೆ ನಿಗದಿ ಮಾಡಿ, ವಿಚಾರಣಾಪಟ್ಟಿಗೆ ಸೇರಿಸುವಂತೆಯೂ ಸೂಚಿಸಿತ್ತು.

ಯಾಕೂಬ್‌ ಶಾ ಎಂಬುವವರು ಈ ತೆರವು ಕಾರ್ಯಾಚರಣೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.