ADVERTISEMENT

ಸುಪ್ರಿಂ ಕೋರ್ಟ್: ದೇಶದ್ರೋಹ ಕಾಯ್ದೆ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 15:41 IST
Last Updated 30 ಏಪ್ರಿಲ್ 2023, 15:41 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ವಸಾಹತುಶಾಹಿ ಅವಧಿಯ ದೇಶದ್ರೋಹ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ನಡೆಸಲಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ನೇತೃತ್ವದ ನ್ಯಾಯಪೀಠವು ಈ ಅರ್ಜಿಗಳನ್ನು ವಿಚಾರಣಾ ಪಟ್ಟಿಗೆ ಸೇರಿಸಿದ್ದು, ಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ.

ಎಡಿಟರ್ಸ್‌ ಗಿಲ್ಡ್‌ , ನಿವೃತ್ತ ಮೇಜರ್‌ ಜನರಲ್ ಎಸ್‌.ಜಿ.ವೊಂಬತ್ಕೆರೆ, ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ, ಪೀಪಲ್ಸ್‌ ಯೂನಿಯನ್‌ ಫಾರ್ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಲ್ಲಿಸಿರುವುದು ಸೇರಿದಂತೆ ಒಟ್ಟು 16 ಅರ್ಜಿಗಳು ವಿಚಾರಣೆಗಾಗಿ ನ್ಯಾಯಪೀಠದ ಮುಂದಿವೆ.

ADVERTISEMENT

ಕಾಯ್ದೆಯಲ್ಲಿನ ವಿವಾದಾಸ್ಪದ ನಿಬಂಧನೆಗಳ ಪರಿಷ್ಕರಣೆಗೆ ಸಂಬಂಧಿಸಿ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ವಿವರಿಸುವ ನಿರೀಕ್ಷೆ ಇದೆ.

ದೇಶದ್ರೋಹ ಕಾಯ್ದೆ ಬಳಸದಂತೆ ಹಾಗೂ ಕಾಯ್ದೆಯಡಿ ಎಫ್‌ಐಆರ್‌ಗಳನ್ನು ದಾಖಲಿಸದಂತೆ ನಿರ್ದೇಶನ ನೀಡಿ ಸುಪ್ರಿಂಕೋರ್ಟ್ ಕಳೆದ ವರ್ಷ ಅಕ್ಟೋಬರ್‌ 31ರಂದು ಆದೇಶಿಸಿತ್ತು. ಕಾಯ್ದೆ ಪರಿಷ್ಕರಣೆಗೆ ಹೆಚ್ಚುವರಿ ಕಾಲಾವಕಾಶವನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.