ADVERTISEMENT

ವೈವಾಹಿಕ ಅತ್ಯಾಚಾರ | ಅಕ್ಟೋಬರ್‌ನಲ್ಲಿ ಅರ್ಜಿಗಳ ವಿಚಾರಣೆ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 11:11 IST
Last Updated 22 ಸೆಪ್ಟೆಂಬರ್ 2023, 11:11 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ವೈವಾಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್‌ ಮಧ್ಯದಲ್ಲಿ ಅರಂಭಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠವು, ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಆರಂಭಿಸಬೇಕು ಎಂಬ ವಕೀಲೆ ಕರುಣಾ ನಂದಿ ಅವರ ಮನವಿಯನ್ನು ಪರಿಗಣಿಸಿ, ಈ ನಿರ್ಧಾರ ಪ್ರಕಟಿಸಿತು.

ADVERTISEMENT

‘ಸಂವಿಧಾನ ಪೀಠದ ಮುಂದೆ ಹಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಗಳ ವಿಚಾರಣೆ ಪೂರ್ಣಗೊಂಡ ನಂತರ ವೈವಾಹಿಕ ಅತ್ಯಾಚಾರ ಕುರಿತ ಅರ್ಜಿಗಳನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು‘ ಎಂದು ನ್ಯಾಯಪೀಠ ಹೇಳಿತು.

‘ಈ ವಿಚಾರವಾಗಿ ವಾದ ಮಂಡನೆಗೆ ಎಷ್ಟು ದಿನಗಳು ಅಗತ್ಯ’ ಎಂದು ಮೆಹ್ತಾ ಹಾಗೂ ಅರ್ಜಿದಾರರನ್ನು ನ್ಯಾಯಪೀಠ ಪ್ರಶ್ನಿಸಿತು.

‘ಈ ವಿಷಯವು ಸಾಮಾಜಿಕವಾಗಿ ಪರಿಣಾಮ ಬೀರುವ ಕಾರಣ, ವಾದ ಮಂಡನೆಗೆ ನನಗೆ ಎರಡು ದಿನಗಳು ಬೇಕು’ ಎಂದು ಮೆಹ್ತಾ ತಿಳಿಸಿದರೆ, ತಮಗೆ ಮೂರು ದಿನಗಳಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಅರ್ಜಿದಾರರ ಪರ ವಕೀಲ ಹೇಳಿದರು.

‘ಹಾಗಾದರೆ, ಅರ್ಜಿಗಳನ್ನು ಮುಂದಿನ ವರ್ಷ ಏಪ್ರಿಲ್‌ನ ವಿಚಾರಣಾ ಪಟ್ಟಿಗೆ ಸೇರಿಸಬೇಕಾಗುತ್ತದೆ’ ಎಂದು ವ್ಯಂಗ್ಯಭರಿ‌ತ ಧಾಟಿಯಲ್ಲಿ ಹೇಳಿದ ಸಿಜೆಐ, ಅಕ್ಟೋಬರ್‌ ಮಧ್ಯದಲ್ಲಿ ವಿಚಾರಣೆಯ ಪಟ್ಟಿಗೆ ಸೇರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.