ADVERTISEMENT

ಒಬಿಸಿ ಪಟ್ಟಿ: ಪ. ಬಂಗಾಳ ಸರ್ಕಾರದ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ಪಿಟಿಐ
Published 24 ಜುಲೈ 2025, 13:36 IST
Last Updated 24 ಜುಲೈ 2025, 13:36 IST
<div class="paragraphs"><p> ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಹೊಸ ಪಟ್ಟಿಗೆ ತಡೆ ನೀಡಿದ್ದ ಕೋಲ್ಕತ್ತ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 28ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ನೀಡಿತು.

ADVERTISEMENT

77 ಸಮುದಾಯಗಳನ್ನು ಸೇರಿಸಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಒಬಿಸಿ ಪಟ್ಟಿಯನ್ನು 2024ರ ಮೇ ತಿಂಗಳಲ್ಲಿ ಹೈಕೋರ್ಟ್‌ ರದ್ದುಗೊಳಿಸಿತ್ತು. ಬಳಿಕ ಸರ್ಕಾರವು ಹೊಸ ಪಟ್ಟಿಯನ್ನು ಸಿದ್ಧಪಡಿಸಿತು. ಈ ಪಟ್ಟಿಗೆ ಇದೇ ಜೂನ್‌ನಲ್ಲಿ ಹೈಕೊರ್ಟ್‌ ತಡೆ ನೀಡಿತ್ತು. ‘ಹಿಂದಿನ ಪಟ್ಟಿಯಲ್ಲಿ ಸೇರಿಸಲಾದ ಸಮುದಾಯಗಳನ್ನೇ ಈ ಪಟ್ಟಿಯಲ್ಲೂ ಸೇರಿಸಿದ್ದೀರಿ’ ಎಂದು ಹೇಳಿ, ಹೊಸ ಪಟ್ಟಿಗೆ ನ್ಯಾಯಾಲಯ ತಡೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.