ADVERTISEMENT

ಒಡಿಶಾ: ಸಂಬಂಧಿ ಸೇರಿ ಐವರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಪಿಟಿಐ
Published 12 ಆಗಸ್ಟ್ 2025, 15:30 IST
Last Updated 12 ಆಗಸ್ಟ್ 2025, 15:30 IST
   

ಕೇಂದ್ರಾಪಢಾ (ಒಡಿಶಾ): ಒಡಿಶಾದ ಕೇಂದ್ರಾಪಢಾ ಜಿಲ್ಲೆಯ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಆಕೆಯ ಹತ್ತಿರದ ಸಂಬಂಧಿ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆ‌ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿಯ ಮನೆಗೆ ಆರೋಪಿ ಸಂಬಂಧಿಯು ಆಗಸ್ಟ್ 9ರ ರಕ್ಷಾ ಬಂಧನದಂದು ಭೇಟಿ ನೀಡಿದ್ದನು. ಈ ವೇಳೆ ಸಂತ್ರಸ್ತೆಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಸ್ಥಳೀಯ ಇತರ ನಾಲ್ಕು ಜನರು ಕೂಡಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ದೂರಿದ್ದಾರೆ. ಆರೋಪಿಯು ಹಳ್ಳಿಯ ದೇವಸ್ಥಾನಕ್ಕೆಂದು ಬಾಲಕಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದನು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.