ADVERTISEMENT

ಮಣಿಪುರದಲ್ಲಿ ಶಾಲೆಗಳ ಪುನರಾರಂಭ

ಪಿಟಿಐ
Published 5 ಜುಲೈ 2023, 11:41 IST
Last Updated 5 ಜುಲೈ 2023, 11:41 IST
ಮಣಿಪುರ ಹಾಗೂ ಜಾರ್ಖಂಡ್ ವಿದ್ಯಾರ್ಥಿನಿಯರು.
ಮಣಿಪುರ ಹಾಗೂ ಜಾರ್ಖಂಡ್ ವಿದ್ಯಾರ್ಥಿನಿಯರು.   

ಇಂಪಾಲ: ಎರಡು ಬುಡಕಟ್ಟು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರದಿಂದ ಮುಚ್ಚಿದ್ದ ಶಾಲೆಗಳನ್ನು ಬುಧವಾರ ಆರಂಭ ಮಾಡಲಾಗಿದೆ.

ಕಳೆದ ಎರಡು ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇಂದಿನಿಂದ ಶಾಲೆಗಳು ಆರಂಭವಾಗಿದ್ದು ಕೆಲವೇ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದರು.

ಶಾಲೆಗಳನ್ನು ಪುನಾರಂಭಮಾಡಿರುವುದನ್ನು ಪೋಷಕರು, ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

ADVERTISEMENT

ಕಳೆದ ಸೋಮವಾರ ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ಬುಧವಾರದಿಂದ (ಜು.5) 8ನೇ ತರಗತಿವರೆಗೂ ಶಾಲೆಗಳನ್ನು ಆರಂಭ ಮಾಡಲಾಗುವುದು ಎಂದು ಹೇಳಿದ್ದರು. 

ಮಣಿಪುರದಲ್ಲಿ ಮೇ 3ರಂದು ಮೇತಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಆರಂಭವಾಗಿತ್ತು. ಹಿಂಸಾಚಾರ ಕೃತ್ಯಗಳಿಗೆ ಸಂಬಂಧಿಸಿದಂತೆ ಇದುವರೆಗೂ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.