ADVERTISEMENT

ಎಚ್‌–1ಬಿ ವೀಸಾ: 2ನೇ ಸುತ್ತಿನ ಲಾಟರಿ ಆಯ್ಕೆ ಪ್ರಕ್ರಿಯೆ ಶೀಘ್ರ

ಪಿಟಿಐ
Published 28 ಜುಲೈ 2023, 15:28 IST
Last Updated 28 ಜುಲೈ 2023, 15:28 IST
ಎಚ್–1ಬಿ ವೀಸಾ
ಎಚ್–1ಬಿ ವೀಸಾ   

ವಾಷಿಂಗ್ಟನ್‌: 2024ನೇ ಆರ್ಥಿಕ ವರ್ಷದಲ್ಲಿ ಎಚ್‌–1ಬಿ ವೀಸಾ ಹಂಚಿಕೆಗಾಗಿ ಎರಡನೇ ಸುತ್ತಿನ ಲಾಟರಿ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಅಮೆರಿಕದ ಇಮಿಗ್ರೇಷನ್‌ ಏಜೆನ್ಸಿಯು ಗುರುವಾರ ಪ್ರಕಟಿಸಿದೆ.

ಈ ವರ್ಷಕ್ಕೆ ನಿಗದಿಯಾಗಿರುವ ಗುರಿ ತಲುಪಲು ‘ಹೆಚ್ಚುವರಿ ನೋಂದಣಿ’ಯಿಂದ ಆಯ್ಕೆ ಪ್ರಕ್ರಿಯೆಯು ಅಗತ್ಯವಾಗಿದೆ ಎಂದು ಏಜೆನ್ಸಿಯು ಅಭಿಪ್ರಾಯಪಟ್ಟಿದೆ. ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತ ಮೂಲದ ವೃತ್ತಿಪರರಿಗೆ ನೆರವಾಗಲಿದೆ.

ಅಮೆರಿಕ ಪೌರತ್ವ ಮತ್ತು ವಲಸಿಗರ ಸೇವೆ (ಯುಎಸ್‌ಸಿಐಎಸ್) ವಿಭಾಗವು ಈ ಕುರಿತ ಹೇಳಿಕೆಯಲ್ಲಿ, ಈಗಾಗಲೇ ವಿದ್ಯುನ್ಮಾನ ನೋಂದಣಿ ಪ್ರಕ್ರಿಯೆ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿ ರ‍್ಯಾಂಡಮ್‌ ಮಾದರಿಯಲ್ಲಿ ಹೆಚ್ಚುವರಿ ನೋಂದಣಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದೆ.

ADVERTISEMENT

ಮಾರ್ಚ್‌ ತಿಂಗಳಲ್ಲಿ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆದಿತ್ತು. 2024ನೇ ಹಣಕಾಸು ವರ್ಷಕ್ಕಾಗಿ ನೋಂದಣಿ ಮಾಡಿರುವವರು ಮಾತ್ರ ಎಚ್‌–1ಬಿ ವೀಸಾಗೆ ಅರ್ಹರಾಗಿದ್ದಾರೆ. ನೋಂದಣಿ ಪ್ರಕ್ರಿಯೆಯು ಏಪ್ರಿಲ್‌ 1, 2023ರಿಂದ ಜೂನ್‌ 30, 2023ರವರೆಗೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.