ಎಂ.ಎಲ್ ಕೊಟ್ರು
(ಚಿತ್ರ –@PCITweets)
ನವದೆಹಲಿ: ದಿ ಸ್ಟೇಟ್ಸ್‌ಮನ್ ಪತ್ರಿಕೆಯ ಮಾಜಿ ಸ್ಥಾನಿಕ ಸಂಸ್ಥಾಪಕ ಎಂ. ಎಲ್. ಕೊಟ್ರು ಅವರು ಗುರುಗ್ರಾಮದಲ್ಲಿ ಗುರುವಾರ ತಡರಾತ್ರಿ ನಿಧನರಾದರು.
ಲಂಡನ್‌ನ ದಿ ಸಂಡೇ ಟೈಮ್ಸ್ ಪತ್ರಿಕೆಯ ಭಾರತದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಕೊಟ್ರು ಅವರು, 1994ರಲ್ಲಿ ಪ್ರಕಟವಾದ ‘ದಿ ಕಾಶ್ಮೀರ್ ಸ್ಟೋರಿ’ಯ ಲೇಖಕರು ಮತ್ತು ‘ಏಷ್ಯಾ 72: ಅಫಿಷಿಯಲ್ ಗೈಡ್’ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.
ಜಮ್ಮು ಮತ್ತು ಕಾಶ್ಮೀರದವರಾದ ಇವರು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಮತ್ತು ಪ್ರೆಸ್ ಅಸೋಸಿಯೇಷನ್‌ನೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಸುಮಾರು ಆರು ದಶಕಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು; ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು ಎಂದು ಪಿಸಿಐ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.