ADVERTISEMENT

ಹಿರಿಯ ಕಾಂಗ್ರೆಸ್‌ ನಾಯಕ ಥಾಮಸ್ ನಿಧನ

ಪಿಟಿಐ
Published 27 ಸೆಪ್ಟೆಂಬರ್ 2020, 20:27 IST
Last Updated 27 ಸೆಪ್ಟೆಂಬರ್ 2020, 20:27 IST
ಸಿ.ಎಫ್.ಥಾಮಸ್
ಸಿ.ಎಫ್.ಥಾಮಸ್   

ಕೋಟ್ಟಯಂ:ಕೇರಳದ ಹಿರಿಯ ಕಾಂಗ್ರೆಸ್‌ ನಾಯಕ, ಚೆಂಗನಶ್ಶೇರಿ ಕ್ಷೇತ್ರದ ಶಾಸಕ ಸಿ.ಎಫ್‌.ಥಾಮಸ್‌ ಭಾನುವಾರ ನಿಧನರಾದರು. 81 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ತಿರುವಳ್ಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

1980ರಿಂದ ಚೆಂಗನಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು, ನಂತರ ನಡೆದ ಚುನಾವಣೆಗಳಲ್ಲಿ ಸತತವಾಗಿ ಗೆಲುವು ದಾಖಲಿಸಿದ್ದರು. 2001ರಿಂದ 2006 ರವರೆಗೆ ಅಧಿಕಾರದಲ್ಲಿದ್ದ ಯುಡಿಎಫ್‌ ಸರ್ಕಾರದಲ್ಲಿ ಥಾಮಸ್‌ ಅವರು ಗ್ರಾಮೀಣಾಭಿವೃದ್ಧಿ, ಖಾದಿ ಮತ್ತು ಗ್ರಾಮೋದ್ಯೋಗ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT