ನವದೆಹಲಿ: ‘ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ಕೋವಿಶೀಲ್ಡ್ ಲಸಿಕೆಯನ್ನು ತುರ್ತುಸಂದರ್ಭದಲ್ಲಿ ಬಳಸಲು ಅನುಮತಿ ನೀಡುವಂತೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇಲಾಖೆಗೆ ಮನವಿ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.
ಡಿಸಿಜಿಐ ಬಳಿ ಅನುಮತಿ ಕೋರಿರುವ ಭಾರತದ ಮೊದಲ ಸಂಸ್ಥೆ ಎಂಬ ಹಿರಿಮೆಗೆ ಎಸ್‌ಐಐ ಭಾಜನವಾಗಿದೆ.
‘ವೈದ್ಯಕೀಯ ಅಗತ್ಯತೆ ಹಾಗೂ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡುವಂತೆ ಪುಣೆಯ ಎಸ್‌ಐಐ, ಡಿಸಿಜಿಐಗೆ ವಿನಂತಿಸಿಕೊಂಡಿದೆ’ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.