ADVERTISEMENT

ಪಾಕ್‌ ಸೇನೆಯ ಮೂವರು ಯೋಧರ ಹತ್ಯೆ

ಗಡಿಯಲ್ಲಿ ಅಪ್ರಚೋದಿತ ಶೆಲ್ ದಾಳಿ: ತಕ್ಕ ಪ್ರತ್ಯುತ್ತರ ನೀಡಿದ ಭಾರತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 18:25 IST
Last Updated 2 ಏಪ್ರಿಲ್ 2019, 18:25 IST
ಪಾಕ್‌ ದಾಳಿಯಲ್ಲಿ ಸೋಮವಾರ ಹುತಾತ್ಮರಾದ ಬಿಎಸ್‌ಎಫ್‌ ಇನ್‌ಸ್ಪೆಕ್ಟರ್ ಟಿ.ಅಲೆಕ್ಸ್ ಲಾಲ್‌ಮಿನ್ಲನ್ ಅವರ ಪಾರ್ಥಿವ ಶರೀರಕ್ಕೆ  ಬಿಎಸ್‌ಎಫ್‌ ಮುಖ್ಯಸ್ಥ ರಜನಿಕಾಂತ್ ಮಿಶ್ರಾ ಅವರು ಮಂಗಳವಾರ ಅಂತಿಮ ನಮನ ಸಲ್ಲಿಸಿದರು –ಪಿಟಿಐ ಚಿತ್ರ
ಪಾಕ್‌ ದಾಳಿಯಲ್ಲಿ ಸೋಮವಾರ ಹುತಾತ್ಮರಾದ ಬಿಎಸ್‌ಎಫ್‌ ಇನ್‌ಸ್ಪೆಕ್ಟರ್ ಟಿ.ಅಲೆಕ್ಸ್ ಲಾಲ್‌ಮಿನ್ಲನ್ ಅವರ ಪಾರ್ಥಿವ ಶರೀರಕ್ಕೆ  ಬಿಎಸ್‌ಎಫ್‌ ಮುಖ್ಯಸ್ಥ ರಜನಿಕಾಂತ್ ಮಿಶ್ರಾ ಅವರು ಮಂಗಳವಾರ ಅಂತಿಮ ನಮನ ಸಲ್ಲಿಸಿದರು –ಪಿಟಿಐ ಚಿತ್ರ   

ಜಮ್ಮು (ಪಿಟಿಐ): ಪಾಕಿಸ್ತಾನಿ ಸೇನಾಪಡೆಗಳು ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಶೆಲ್ ದಾಳಿಗೆ ಭಾರತೀಯ ಸೇನಾಪಡೆ ಮಂಗಳವಾರ ತಕ್ಕ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನದ ಗಡಿಯಲ್ಲಿದ್ದ ಏಳು ಸೇನಾನೆಲೆಗಳನ್ನು ನಾಶ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರುಖ್ ಕಾಕರಿ, ರಾವಲ್‌ಕೋಟ್‌ ಗಡಿಯ ಏಳು ಮುಂಚೂಣಿ ಸೇನಾನೆಲೆಗಳನ್ನು ನಾಶ ಮಾಡಲಾಗಿದೆ. ಈ ವೇಳೆಪಾಕಿಸ್ತಾನದ ಹಲವು ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಭಾರತೀಯ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಪಾಕ್ ಪಡೆಯ 3 ಯೋಧರು ಮೃತಪಟ್ಟಿದ್ದಾರೆ’ ಎಂದು ಪಾಕಿಸ್ತಾನದ ಅಂತರ–ಸೇವಾ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್) ತಿಳಿಸಿದೆ.

ಸವಾಲು ಎದುರಿಸಲು ಸಿದ್ಧ’

ADVERTISEMENT

ಜಮ್ಮು (ಪಿಟಿಐ): ‘ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಸೇನಾಪಡೆಗಳು, ಯಾವುದೇ ಸವಾಲು ಒಡ್ಡಿದರೂ ಅದನ್ನು ಎದುರಿಸಲು ನಮ್ಮ ಪಡೆ ಸಂಪೂರ್ಣ ಸಿದ್ಧವಿದೆ‌’ ಎಂದು ಬಿಎಸ್‌ಎಫ್ ಮುಖ್ಯಸ್ಥ ರಜನಿಕಾಂತ್ ಮಿಶ್ರಾ ಹೇಳಿದ್ದಾರೆ.

ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ಪಾಕ್ ದಾಳಿ ನಡೆಸುತ್ತಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.