ADVERTISEMENT

ದೆಹಲಿಯಲ್ಲಿ ಅಗ್ನಿ ದುರಂತ: ಅಗ್ನಿಶಾಮಕ ಸಿಬ್ಬಂದಿ ಮೇಲೆ ಕುಸಿದ ಅವಶೇಷ

ಏಜೆನ್ಸೀಸ್
Published 2 ಜನವರಿ 2020, 5:42 IST
Last Updated 2 ಜನವರಿ 2020, 5:42 IST
ದೆಹಲಿಯ ಅಗ್ನಿದುರಂತ ಸ್ಥಳದಲ್ಲಿರುವ ರಕ್ಷಣಾ ವಾಹನಗಳು (Pic Courtesy: twitter.com/MeharBhagat)
ದೆಹಲಿಯ ಅಗ್ನಿದುರಂತ ಸ್ಥಳದಲ್ಲಿರುವ ರಕ್ಷಣಾ ವಾಹನಗಳು (Pic Courtesy: twitter.com/MeharBhagat)   

ನವದೆಹಲಿ: ಪಶ್ಚಿಮ ದೆಹಲಿಯ ಪೀರಾ ಗಾರ್ಹಿ ಪ್ರದೇಶದಲ್ಲಿ ಉರಿಯುತ್ತಿದ್ದಕಾರ್ಖಾನೆಯ ಅವಶೇಷವು ಭಾರಿ ಸ್ಫೋಟದೊಂದಿಗೆ ಅಗ್ನಿಶಾಮಕ ಸಿಬ್ಬಂದಿಯೂ ಸೇರಿದಂತೆ ಹಲವರ ಮೇಲೆ ಕುಸಿದಿದೆ.

ದುರಂತ ಸ್ಥಳದಲ್ಲಿ 35 ಅಗ್ನಿಶಾಮಕ ವಾಹನಗಳು ಇದ್ದವು. ಸ್ಫೋಟದೊಂದಿಗೆ ಕಟ್ಟಡದ ಅವಶೇಷಗಳು ಉರುಳಿದ ಸಂದರ್ಭಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಯತ್ನಿಸುತ್ತಿದ್ದರು.

ನಸುಕಿನ 4.30ಕ್ಕೆ ಅಗ್ನಿಶಾಮಕ ಇಲಾಖೆಗೆ ಸಹಾಯಯಾಚಿಸಿ ಕರೆಯೊಂದು ಬಂದಿತ್ತು. ತಕ್ಷಣ ಅಲ್ಲಿಗೆ 7 ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಘಟನೆಯ ಬಗ್ಗೆ ತಿಳಿದು ಬೇಸರವಾಯಿತು. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜನರನ್ನು ಕಾಪಾಡಲು ತಮ್ಮ ಕೈಲಾದ ಎಲ್ಲ ಕೆಲಸ ಮಾಡುತ್ತಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.