ಇಟಾನಗರ(ಅರುಣಾಚಲ ಪ್ರದೇಶ): ಬಾಲಕಿಯರಿಗೆ ಲೈಂಕಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕನನ್ನು ಕೆಲ ಉದ್ರಿಕ್ತರು, ಠಾಣೆಯಿಂದ ಹೊರಗೆಳೆದು ಥಳಿಸಿ ಕೊಂದಿರುವ ಘಟನೆ ಅರುಣಾಚಲಪ್ರದೇಶದಲ್ಲಿ ನಡೆದಿದೆ.
ಅಸ್ಸಾಂನಿಂದ ವಲಸೆ ಬಂದಿದ್ದ 19 ವರ್ಷದ ಯುವಕನೊಬ್ಬ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದಡಿ ಆತನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿಯರ ಪೋಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಒಂದು ದಿನದ ಬಳಿಕ ಪೊಲೀಸ್ ಠಾಣೆಗೆ ನುಗ್ಗಿದ ಕೆಲ ಉದ್ರಿಕ್ತರು, ಆರೋಪಿಯನ್ನು ಹೊರಗೆ ಎಳೆದು, ಥಳಿಸಿ ಕೊಂದಿದ್ದಾರೆ.
ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯ ರೋಯಿಂಗ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಇದರಿಂದ ಪೊಲೀಸ್ ಠಾಣೆ ಹೊರಗೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು ಶಾಲೆಯ ಬಳಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.