ADVERTISEMENT

ಶಬರಿಮಲೆ ಬಾಲಕಿಗೆ ‍ಪ್ರವೇಶ ನಿರಾಕರಣೆ

ಪಿಟಿಐ
Published 19 ನವೆಂಬರ್ 2019, 15:13 IST
Last Updated 19 ನವೆಂಬರ್ 2019, 15:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಬರಿಮಲೆ: ಪುದುಚರಿಯ 12 ವರ್ಷದ ಬಾಲಕಿಯ ಶಬರಿಮಲೆ ದೇವಸ್ಥಾನ ಪ್ರವೇಶವನ್ನು ಮಂಗಳವಾರ ಬೆಳಿಗ್ಗೆ ನಿರಾಕರಿಸಲಾಯಿತು.

ಬಾಲಕಿಯು ತನ್ನ ತಂದೆಯೊಂದಿಗೆ ಬಂದಿದ್ದರು. ದರ್ಶನಕ್ಕಾಗಿ ಆನ್‌ಲೈನ್‌ ನೋಂದಣಿಯಲ್ಲಿ ಬಾಲಕಿಯ ವಯಸ್ಸು 10 ಎಂದಿತ್ತು. ನಂತರ ಮಹಿಳಾ ಪೊಲೀಸರು ಆಧಾರ್‌ ಕಾರ್ಡ್‌ ಅನ್ನು ಪರೀಕ್ಷಿಸಿದಾಗ ಬಾಲಕಿಯ ವಯಸ್ಸು 12 ಎಂದು ತಿಳಿದುಬಂದಿದೆ. ಆದ್ದರಿಂದ ಆಕೆಯನ್ನು ದರ್ಶನಕ್ಕೆ ಅವಕಾಶವನ್ನು ನಿರಾಕರಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT