ನವದೆಹಲಿ: ‘ಬಿಹಾರದಲ್ಲಿ 160 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟವು ಗಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಮತ ಕಳವು (ವಿಸಿ) ಹಾಗೂ ಮತಕ್ಕೆ ಗಾಳ(ವಿಆರ್)ದಂತಹ ಕುತಂತ್ರಗಳನ್ನು ಪ್ರಜ್ಞಾವಂತ ಮತದಾರರು ಸೋಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.
‘ಬಿಹಾರದಲ್ಲಿ ಸೂತ್ರಧಾರ (ನಿರ್ದೇಶಕ) ‘ವಿಸಿ’ ಗುರಿಯನ್ನು ನಿಗದಿಪಡಿಸಿದ್ದಾರೆ. 243 ಸ್ಥಾನಗಳ ಪೈಕಿ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಆತ್ಮವಿಶ್ವಾಸದಿಂದ ಘೋಷಿಸಿದ್ದಾರೆ. ವಿಸಿ ಹಾಗೂ ವಿಆರ್ ಈ ಫಲಿತಾಂಶವನ್ನು ತರುತ್ತದೆ ಎಂದು ಆಶಿಸುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಗೆದ್ದರೆ ಅದರ ಮೊದಲ ಕಂಪನ ನವದೆಹಲಿಯಲ್ಲಿ ಆಗಿರುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಶಿಕ್ಷಣದಲ್ಲಿ ವಿಸಿ ಎಂದರೆ ವೈಸ್ ಛಾನ್ಸಲರ್, ನವೋದ್ಯಮ ಜಗತ್ತಿನಲ್ಲಿ ವಿಸಿ ಎಂದರೆ ವೆಂಚರ್ ಕ್ಯಾಪಿಟಲ್, ಸೇನೆಯಲ್ಲಿ ವಿಸಿ ಎಂದರೆ ವೀರಚಕ್ರ. ಆದರೆ, ಈಗ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮತ ಕಳವು ಎಂದರೆ ‘ವಿಸಿ’ ಎಂದು ವ್ಯಾಖ್ಯಾನಿಸುವಂತಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.