ADVERTISEMENT

ಬಾಂಗ್ಲಾದ ನೂತನ ಅಧ್ಯಕ್ಷರಾಗಿ ಮೊಹಮ್ಮದ್‌ ಚುಪ್ಪು ಆಯ್ಕೆ

ಪಿಟಿಐ
Published 14 ಫೆಬ್ರುವರಿ 2023, 13:34 IST
Last Updated 14 ಫೆಬ್ರುವರಿ 2023, 13:34 IST
   

ಢಾಕಾ : ಬಾಂಗ್ಲಾದೇಶದ 22ನೇ ಅಧ್ಯಕ್ಷರಾಗಿ, ವಿಶ್ರಾಂತ ನ್ಯಾಯಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ 74 ವರ್ಷದ ಮೊಹಮ್ಮದ್ ಚುಪ್ಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಚುನಾವಣಾ ಆಯೋಗ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ಹಾಲಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಹಮೀದ್‌ ಅವರ ಸೇವಾವಧಿ ಮುಕ್ತಾಯವಾದ ಬಳಿಕ ತೆರವಾಗುವ ಸ್ಥಾನದಲ್ಲಿ ಏಪ್ರಿಲ್ 24ರಂದು ಅಧಿಕಾರ ವಹಿಸಿಕೊಳ್ಳುವರು.

ಸಂಸತ್ತಿನಲ್ಲಿ ಬಹುಮತ ಹೊಂದಿರುವ ಅವಾಮಿ ಲೀಗ್‌ ಪಕ್ಷವು ಚುಪ್ಪು ಅವನ್ನು ದೇಶದ ಉನ್ನತ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು. ಬಳಿಕ ಕಳೆದ ಭಾನುವಾರ ಚುಪ್ಪು ಅವರು ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಹಾಲಿ ಅಧ್ಯಕ್ಷ ಹಮೀದ್‌ ಅವರು ದೀರ್ಘಾವಧಿ ಅಧ್ಯಕ್ಷರಾಗಿದ್ದ ಹಿರಿಮೆಗೆ ಪಾತ್ರರಾಗಲಿದ್ದಾರೆ. ಅವರ ಎರಡನೇ ಅವಧಿಯು ಇದೇ ಏಪ್ರಿಲ್ 23ರಂದು ಅಂತ್ಯವಾಗಲಿದೆ.

ಚುಪ್ಪು ಅವರು ದೇಶದ ಭ್ರಷ್ಟಾಚಾರ ನಿಗ್ರಹ ಆಯೋಗದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ, ಅವಾಮಿ ಲೀಗ್‌ನ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.