
ನವದೆಹಲಿ: ‘2020ರ ದೆಹಲಿ ಗಲಭೆಗೆ ಮುನ್ನ ಉಮರ್ ಖಾಲಿದ್ ನನ್ನ ಕಕ್ಷಿದಾರ ಶರ್ಜೀಲ್ ಇಮಾಮ್ ಅವರಿಗೆ ಎಂದಿಗೂ ಮಾರ್ಗದರ್ಶನ ನೀಡಿಲ್ಲ. ಇಮಾಮ್ ಅವರು ಖಾಲಿದ್ ಅವರ ಶಿಷ್ಯರಾಗಿದ್ದರು ಎಂಬ ಪ್ರಾಸಿಕ್ಯೂಷನ್ ಆರೋಪವು ಅಸಂಬದ್ಧ’ ಎಂದು ಶರ್ಜೀಲ್ ಇಮಾಮ್ ಪರ ವಕೀಲರು ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾರೆ.
ಪ್ರಕರಣದ ಆರೋಪಿ ಶರ್ಜೀಲ್ ಇಮಾಮ್ ವಿರುದ್ಧದ ಆರೋಪದ ಕುರಿತು ವಾದಗಳನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೈ ಆಲಿಸಿದರು.
ಜೈಲಿನಲ್ಲಿರುವ ಶರ್ಜೀಲ್ ಇಮಾಮ್ ಪರ ವಕೀಲರು, ‘ಇಮಾಮ್ ಮತ್ತು ಖಾಲಿದ್ ಅವರು ಜೆಎನ್‌ಯು ವಿದ್ಯಾರ್ಥಿಗಳಾಗಿದ್ದರೂ, ಅವರ ನಡುವೆ ಯಾವುದೇ ನೇರ ಅಥವಾ ಪರೋಕ್ಷ ಸಂವಹನ ನಡೆದಿಲ್ಲ. ಪ್ರಾಸಿಕ್ಯೂಷನ್ ಬಳಿ ಇರುವ ಸಾಕ್ಷ್ಯಗಳಿಂದ ಈ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.