ತಿರುವನಂತಪುರಂ: ತೈಲ ತುಂಬಿದ 640 ಕಂಟೈನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಕೇರಳದ ಕರಾವಳಿ ಪ್ರದೇಶಗಳಿಗೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ಘೋಷಿಸಿದೆ.
ಆಳಪ್ಪುಳದಿಂದ 14.6 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಮುಳುಗಡೆಯಾಗಿದೆ. ಮರೈನ್ ಗ್ಯಾಸ್ ಆಯಿಲ್ (ಎಂಜಿಒ) ಹಾಗೂ ವೆರಿ ಲೋ ಸೆಲ್ಫರ್ ಫ್ಯುಯೆಲ್ ಆಯಿಲ್ ತುಂಬಿದ್ದ ಕಂಟೈನರ್‌ಗಳೂ ಹಡಗಿನಲ್ಲಿರುವುದು ಆತಂಕ ಹೆಚ್ಚಿಸಿದೆ.
ಕಂಟೈನರ್‌ಗಳನ್ನು ನಾಶಪಡಿಸಲು ಭಾರತೀಯ ಕರಾವಳಿ ಭದ್ರತಾ ಪಡೆಗಳು ಪ್ರಯತ್ನಿಸುತ್ತಿವೆ. ಆದಾಗ್ಯೂ, ಕಂಟೈನರ್‌ಗಳು ತಿರುವನಂತಪುರಂ, ಕೊಲ್ಲಂ, ಆಳಪ್ಪುಳ ಹಾಗೂ ಕೊಚ್ಚಿ ಕರಾವಳಿ ಪ್ರದೇಶಗಳತ್ತ ತೇಲಿ ಬರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಕಂಟೈನರ್ ಕಂಡುಬಂದರೆ, ಕರಾವಳಿ ಪ್ರದೇಶಗಳಲ್ಲಿನ ಜನರು ಅದರ ಸಮೀಪಕ್ಕೆ ತೆರಳದಂತೆ, 200 ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.