ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಶಾಸಕ ಪ್ರತಾಪ್ ಸರ್‌ನಾಯಕ್ ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಿದ್ದಾರೆ.
ಮಹಾರಾಷ್ಟ್ರದ ಓವಲ್-ಮೈಜ್ವಾಡಾದ ಶಾಸಕ ಪ್ರತಾಪ್ ಸರ್‌ನಾಯಕ್ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಬಾರ್ಲಾಡ್‌ನಲ್ಲಿರುವ ಇ.ಡಿ. ಕಚೇರಿಗೆ ಆಗಮಿಸಿದರು.
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗೆ(ಎಂಎಂಆರ್‌ಡಿಎ) ಸೆಕ್ಯುರಿಟಿ ಗಾರ್ಡ್‌ಗಳನ್ನು ಒದಗಿಸುವ ಸಂಬಂಧ ಟಾಪ್ ಗ್ರೂಪ್ ಸೆಕ್ಯುರಿಟಿ ಸರ್ವಿಸ್ ಪ್ರೊವೈಡರ್ ಕಂಪನಿಯು ಅಕ್ರಮ ಹಣಕಾಸು ವ್ಯವಹಾರ ನಡೆಸಿದೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸರ್‌ನಾಯಕ್ ಅವರನ್ನು ಇಡಿಯು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಈಗಾಗಲೇ ಇಡಿಯು ಟಾಪ್ ಗ್ರೂಪ್ ಸೆಕ್ಯುರಿಟಿ ಸರ್ವಿಸ್ ಪ್ರೊವೈಡರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ. ಶಶಿಧರನ್ ಮತ್ತು ಅಮಿತ್ ಚಾಂಡೋಲೆ ಅವರನ್ನು ಬಂಧಿಸಿದೆ. ಇವರಿಬ್ಬರು ಪ್ರತಾಪ್ ಸರ್‌ನಾಯಕ್ ಅವರ ಆಪ್ತರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.