ADVERTISEMENT

ಸೇನಾ ಕ್ಯಾಪ್ಟನ್‌ ವಿರುದ್ಧ ಕೋರ್ಟ್‌ ಮಾರ್ಷಲ್‌

ಶೋಪಿಯಾನ್ ನಕಲಿ ಎನ್‌ಕೌಂಟರ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 10:36 IST
Last Updated 4 ಏಪ್ರಿಲ್ 2022, 10:36 IST
   

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಅಹಿಂಸಾಪೋರಾ ಗ್ರಾಮದ ನಕಲಿ ಎನ್‌ಕೌಂಟರ್‌ ಪ್ರಕರಣ ಸಂಬಂಧ ಭಾರತೀಯ ಸೇನೆಯು ತನ್ನ ಕ್ಯಾಪ್ಟನ್‌ ವಿರುದ್ಧ ಕೋರ್ಟ್‌ ಮಾರ್ಷಲ್‌ ಪ್ರಕ್ರಿಯೆ ಆರಂಭಿಸಿದೆ.

2020ರ ಜುಲೈನಲ್ಲಿ ಅಹಿಂಸಾಪೋರಾ ಎಂಬ ಗ್ರಾಮದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಮೂವರು ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಪ್ರಕರಣ ಇದಾಗಿದೆ.

‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಫ್‌ಎಸ್‌ಪಿಎ) ಉಲ್ಲಂಘನೆ ಆರೋಪದಡಿ ಸೇನೆಯ 62ನೇ ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್‌ ಬುಪಿಂದರ್‌ ಅವರ ವಿರುದ್ಧ ವಿಚಾರಣೆ ನಡೆಯಲಿದೆ’ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.