ADVERTISEMENT

ಕಾಶ್ಮೀರ್‌ ಟೈಮ್ಸ್‌ ಮೇಲೆ ಎಸ್‌ಐಎ ದಾಳಿ: ಮದ್ದುಗುಂಡು ವಶ

ಪಿಟಿಐ
Published 20 ನವೆಂಬರ್ 2025, 13:33 IST
Last Updated 20 ನವೆಂಬರ್ 2025, 13:33 IST
ಜಮ್ಮುನಲ್ಲಿರುವ ‘ಕಾಶ್ಮೀರ್‌ ಟೈಮ್ಸ್‌’ ಪತ್ರಿಕೆಯ ಕಚೇರಿ ಮೇಲೆ ರಾಜ್ಯ ತನಿಖಾ ದಳದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು– ಪಿಟಿಐ ಚಿತ್ರ
ಜಮ್ಮುನಲ್ಲಿರುವ ‘ಕಾಶ್ಮೀರ್‌ ಟೈಮ್ಸ್‌’ ಪತ್ರಿಕೆಯ ಕಚೇರಿ ಮೇಲೆ ರಾಜ್ಯ ತನಿಖಾ ದಳದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು– ಪಿಟಿಐ ಚಿತ್ರ   

ಜಮ್ಮು : ‘ಕಾಶ್ಮೀರ್‌ ಟೈಮ್ಸ್‌’ ಪತ್ರಿಕೆಯ ಕಚೇರಿ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ದಳವು (ಎಸ್‌ಐಎ) ಗುರುವಾರ ದಾಳಿ ನಡೆಸಿದೆ. 

ದಾಳಿ ವೇಳೆ ಎಕೆ ರೈಫಲ್‌ ಮತ್ತು ಪಿಸ್ತೂಲ್‌ಗಳಲ್ಲಿ ಬಳಸುವ ಮದ್ದುಗುಂಡುಗಳು, ಗ್ರೆನೇಡ್‌ನ ಪಿನ್‌ಗಳು ಹಾಗೂ ಇತರ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕಚೇರಿ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಕಂಪ್ಯೂಟರ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ದೇಶ ವಿರೋಧಿ ಚಟುವಟಿಕೆಗಳನ್ನು ‌ಉತ್ತೇಜಿಸುತ್ತಿರುವ ಆರೋಪದ ಮೇಲೆ ಪತ್ರಿಕೆ ಹಾಗೂ ಅದರ ಮುಖ್ಯಸ್ಥರ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿದೆ. ಪತ್ರಿಕೆಯ ಮುಖ್ಯಸ್ಥರನ್ನು ವಿಚಾರಣೆಗೊಳ‍ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಸುರಿ‌ಂದರ್‌ ಸಿಂಗ್‌ ಚೌಧರಿ, ‘ತಪ್ಪು ನಡೆದಿರುವುದು ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡದಿಂದ ಕ್ರಮ ತೆಗೆದುಕೊಳ್ಳಬಾರದು. ಪತ್ರಿಕೆಯಿಂದ ತಪ್ಪಾಗಿದ್ದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.