ADVERTISEMENT

ಕಸ್ಟಡಿಯಿಂದ ಪರಾರಿಯಾಗಿದ್ದ ಸಿಧು ಮೂಸೆವಾಲಾ ಹತ್ಯೆ ಆರೋಪಿ ದೆಹಲಿ ಪೊಲೀಸ್ ಬಲೆಗೆ

ಪಿಟಿಐ
Published 20 ಅಕ್ಟೋಬರ್ 2022, 4:36 IST
Last Updated 20 ಅಕ್ಟೋಬರ್ 2022, 4:36 IST
   

ನವದೆಹಲಿ: ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಪಂಜಾಬ್ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ದೀಪಕ್ ಟಿನುನನ್ನು ದೆಹಲಿ ಪೊಲೀಸ್‌ನ ವಿಶೇಷ ದಳ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ಪೊಲೀಸ್ ಬಂಧನದಲ್ಲಿದ್ದ ಗ್ಯಾಂಗ್‌ಸ್ಟರ್ ದೀಪಕ್ ಟಿನು, ಅಕ್ಟೋಬರ್ 1ರಂದು ಪರಾರಿಯಾಗಿದ್ದನು.

ಪಲಾಯನ ಮಾಡಿದ ಬಳಿಕ ಈತ ತನ್ನ ಅಡಗುತಾಣವನ್ನು ಬದಲಿಸುತ್ತಲೇ ಇದ್ದ. ಈತನ ಬಂಧನಕ್ಕೆ ದೆಹಲಿ ಪೊಲೀಸ್ ದೇಶದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶೇಷ ಪೊಲೀಸ್ ಆಯಕ್ತ (ವಿಶೇಷ ದಳ) ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ.

ADVERTISEMENT

ಗ್ಯಾಂಗ್‌ಸ್ಟರ್ ದೀಪಕ್ ಟಿನು ಬಳಿಯಿಂದ ಐದು ಗ್ರೆನೇಡ್ ಹಾಗೂ ಎರಡು ಆಟೋಮ್ಯಾಟಿಕ್ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ.

ಮಾನ್ಸಾ ಪೊಲೀಸ್‌ನ ಅಪರಾಧ ತನಿಖಾ ಸಂಸ್ಥೆಯ (ಸಿಐಐ) ಘಟಕ ಮತ್ತೊಂದು ಪ್ರಕರಣದಲ್ಲಿ ಟಿನುನನ್ನು ಪ್ರೊಡಕ್ಷನ್ ವಾರಂಟ್ ಮೇಲೆ ಗೋಯಿಂದ್‌ವಾಲ್ ಸಾಹಿಬ್ ಜೈಲಿನಿಂದ ಕರೆತರುವಾಗ ಆತ ಪರಾರಿಯಾಗಿದ್ದನು.

ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.