ADVERTISEMENT

ಭಾರತೀಯ ಸೇನೆ ಬತ್ತಳಿಕೆಗೆ ಸೇರಲಿವೆ 73 ಸಾವಿರ ಅಮೆರಿಕ ಬಂದೂಕು

73 ಸಾವಿರ ಸಿಗ್ ಸಾವರ್‌ ಬಂದೂಕು ಖರೀದಿ

ಪಿಟಿಐ
Published 2 ಫೆಬ್ರುವರಿ 2019, 20:24 IST
Last Updated 2 ಫೆಬ್ರುವರಿ 2019, 20:24 IST
ಅಮೆರಿಕದ ಸಿಗ್ ಸಾವರ್‌ ಬಂದೂಕು
ಅಮೆರಿಕದ ಸಿಗ್ ಸಾವರ್‌ ಬಂದೂಕು   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಅಮೆರಿಕದ ಅತ್ಯಾಧುನಿಕ ಸಿಗ್‌ ಸಾವರ್‌ ಬಂದೂಕುಗಳು ಶೀಘ್ರದಲ್ಲಿಯೇ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ.

ಅಮೆರಿಕದಿಂದ 73 ಸಾವಿರ ಸಿಗ್ ಸಾವರ್‌ ಬಂದೂಕು ಖರೀದಿಸಲು ರಕ್ಷಣಾ ಸಚಿವಾಲಯವು ಭಾರತೀಯ ಸೇನೆಗೆ ಒಪ್ಪಿಗೆ ನೀಡಿದೆ.ಚೀನಾ ಗಡಿಯಲ್ಲಿ ನಿಯೋಜಿಸಲಾದ ಭಾರತೀಯ ಯೋಧರಿಗೆ ಈ ಬಂದೂಕು ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ವಾರದ ಒಳಗಾಗಿ ಖರೀದಿ ಒಪ್ಪಂದ ಅಂತಿಮಗೊಳ್ಳಲಿದ್ದು ತ್ವರಿತವಾಗಿ ಬಂದೂಕುಗಳನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ADVERTISEMENT

ಪ್ರಸಿದ್ಧ ಸಿಗ್‌ ಸಾವರ್‌ ಬಂದೂಕುಗಳನ್ನು ಅಮೆರಿಕ ಮತ್ತು ಅನೇಕ ಯುರೋಪ್‌ ರಾಷ್ಟ್ರಗಳ ಸೇನೆಗಳು ಬಳಸುತ್ತಿವೆ. ಭಾರತೀಯ ಸೇನೆ ಇನ್ಸಾಸ್‌ ಬಂದೂಕುಗಳನ್ನು ಬಳಸುತ್ತಿದೆ.

ಇಶಾಪೋರ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ಬಂದೂಕು ಕಾರ್ಖಾನೆ ತಯಾರಿಸಿದ ಬಂದೂಕುಗಳು ಸೇನೆಯ ಪರೀಕ್ಷೆಯಲ್ಲಿ ವಿಫಲವಾಗಿದ್ದವು. ಇದರಿಂದಾಗಿ ಭಾರತೀಯ ಸೇನೆ ಈ ಬಂದೂಕು ಖರೀದಿಸಲು 18 ತಿಂಗಳ ಹಿಂದೆ ನಿರಾಕರಿಸಿತ್ತು.

ನಂತರ ಶಸ್ತ್ರಾಸ್ತ್ರ ತಜ್ಞರು ಭಾರತೀಯ ಸೇನೆಗೆ ಹೊಂದಿಕೊಳ್ಳುವ ಬಂದೂಕುಗಳಿಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಶೋಧ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.