ADVERTISEMENT

Covid19 India Updates: 2,151 ಹೊಸ ಪ್ರಕರಣ; ಐದು ತಿಂಗಳಲ್ಲೇ ಅಧಿಕ 

ಪಿಟಿಐ
Published 29 ಮಾರ್ಚ್ 2023, 6:01 IST
Last Updated 29 ಮಾರ್ಚ್ 2023, 6:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ದೃಢಪಟ್ಟ 2,151 ಪ್ರಕರಣಗಳು ದಾಖಲಾಗಿದ್ದು, ಇದು ಐದು ತಿಂಗಳಲ್ಲೇ ಒಂದು ದಿನದಲ್ಲಿ ದಾಖಲಾದ ಅಧಿಕ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆಯಿಂದ ತಿಳಿದುಬಂದಿದೆ.

ಈ ಮೂಲಕ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,903ಕ್ಕೆ ಏರಿಕೆಯಾಗಿದೆ.

2022 ಅಕ್ಟೋಬರ್‌ನಲ್ಲಿ 28ರಂದು ದಾಖಲಾದ 2,208 ಕೋವಿಡ್ ಪ್ರಕರಣಗಳು ಇಲ್ಲಿವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು.

ADVERTISEMENT

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಮೂವರು, ಕರ್ನಾಟಕದಲ್ಲಿ ಒಬ್ಬರು ಮೃತಪಟ್ಟಿದ್ದು, ಕೋವಿಡ್ ಸಾವಿನ ಸಂಖ್ಯೆ 5,30,848ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ 1.19 ಆಗಿದೆ.

ಸೋಂಕು ದೃಢಪಡುತ್ತಿರುವ ಪ್ರಮಾಣವು ದಿನಕ್ಕೆ ಶೇ 1.51 ಆಗಿದ್ದು, ವಾರಕ್ಕೆ ಶೇ 1.53 ರಷ್ಟು ಇದೆ.

ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,47,09,676 ಆಗಿದೆ. ಇದರಲ್ಲಿ 4,41,66,925 ಜನರು ಗುಣಮುಖರಾಗಿದ್ದಾರೆ.

ಒಟ್ಟು ಸೋಂಕಿತರಲ್ಲಿ ಶೇ 0.03 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣ ಶೇ 98.78 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.