ADVERTISEMENT

ಹೌರಾ ಶಾಂತ: ನಿಷೇಧಾಜ್ಞೆ ಮುಂದುವರಿಕೆ- ತನಿಖೆ ಕೈಗೆತ್ತಿಕೊಂಡ ಸಿಐಡಿ

ಪಿಟಿಐ
Published 1 ಏಪ್ರಿಲ್ 2023, 12:27 IST
Last Updated 1 ಏಪ್ರಿಲ್ 2023, 12:27 IST
ಪಶ್ಚಿಮ ಬಂಗಾಳದ ಹೌರಾ ನಗರದ ಕಾಜಿಪಾಡಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಪಥಸಂಚಲನ ನಡೆಸಿದರು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಹೌರಾ ನಗರದ ಕಾಜಿಪಾಡಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಪಥಸಂಚಲನ ನಡೆಸಿದರು –ಪಿಟಿಐ ಚಿತ್ರ   

ಹೌರಾ, ಪಶ್ಚಿಮ ಬಂಗಾಳ: ರಾಮ ನವಮಿ ಅಂಗವಾಗಿ ನಡೆದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಹೌರಾದ ಕಾಜಿಪಾಡಾ ಪ್ರದೇಶದಲ್ಲಿ ಪರಿಸ್ಥಿತಿಯು ಶನಿವಾರ ಹತೋಟಿಯಲ್ಲಿದ್ದು, ಶಾಂತಿ ನೆಲೆಸಿತ್ತು.

ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಅಂಗಡಿಗಳು ತೆರೆದಿದ್ದು, ಮಾರುಕಟ್ಟೆಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಬಿಗಿ ಭದ್ರತೆ ನಡುವೆಯೇ ವಾಹನಗಳ ಸಂಚಾರವೂ ಆರಂಭವಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಘರ್ಷಣೆ ವೇಳೆ ಉದ್ರಿಕ್ತರು ಹಲವಾರು ಅಂಗಡಿಗಳು ಹಾಗೂ ಮನೆಗಳನ್ನು ಧ್ವಂಸಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಜಿಪಾಡಾ ಪ್ರದೇಶದಲ್ಲಿ ನಿಷೇಧಾಜ್ಞೆಯ ಮುಂದುವರಿಕೆ ಜೊತೆಗೆ, ಇಂಟರ್‌ನೆಟ್‌ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದೂ ಹೇಳಿದ್ದಾರೆ.

ADVERTISEMENT

ಘಟನೆ ಕುರಿತ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಶುಕ್ರವಾರ ತಡರಾತ್ರಿ ಕೂಡ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾದವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.