ADVERTISEMENT

ಚಿತ್ರಕೂಟ: ಪಿಕಪ್ ವಾಹನ ಹರಿದು ಆರು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 11:17 IST
Last Updated 9 ಜುಲೈ 2022, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರಕೂಟ (ಉತ್ತರ ಪ್ರದೇಶ): ವೇಗವಾಗಿ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಆರು ಜನರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ ರೌಲಿ ಕಲ್ಯಾಣಪುರ ಗ್ರಾಮದಲ್ಲಿ ಟೊಮೆಟೊ ಸಾಗಿಸುತ್ತಿದ್ದ ವಾಹನ ಎಂಟು ಜನರ ಮೇಲೆ ಹರಿದ ಪರಿಣಾಮ, ಐದು ಮಂದಿ ಸ್ಥಳದಲ್ಲೇ, ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಚಿತ್ರಕೂಟದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ರೈ ಹೇಳಿದ್ದಾರೆ.

ಇವರೆಲ್ಲರೂ ಜರಿ ಗ್ರಾಮದ ನಿವಾಸಿಗಳು, ಮದುವೆ ಸಮಾರಂಭದಲ್ಲಿ ಭಾಗವಹಿಸಲು ರೌಲಿ ಕಲ್ಯಾಣಪುರ ಗ್ರಾಮಕ್ಕೆ ಬಂದಿದ್ದರು.ಜೀಪ್ ಚಾಲಕನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.