ನವದೆಹಲಿ: ‘ಕನ್ನಡದ ಖ್ಯಾತ ಕಾದಂಬರಿಕಾರ ಹಾಗೂ ತತ್ವಜ್ಞಾನಿ ಎಸ್.ಎಲ್.ಭೈರಪ್ಪ ಅವರದು ಅಸಾಧಾರಣ ವ್ಯಕ್ತಿತ್ವ. ಜನರ ಅಂತಃಸಾಕ್ಷಿಯನ್ನು ಕಲಕಿದ್ದ ಮೇರು ವ್ಯಕ್ತಿಯಾಗಿದ್ದ ಭೈರಪ್ಪ ಅವರು ಭಾರತದ ಆತ್ಮವನ್ನು ಆಳವಾಗಿ ಪರಿಶೋಧಿಸಿದ ಧೀಮಂತ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಈ ಮಾತು ಹೇಳಿರುವ ಅವರು,‘ಭೈರಪ್ಪ ಅವರು ನಿರ್ಭೀತ ಹಾಗೂ ಕಾಲಾತೀತ ಚಿಂತಕ. ವಿಚಾರ ಪ್ರಚೋದಕ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು’ ಎಂದಿದ್ದಾರೆ.
‘ಅವರ ಬರಹಗಳು ಅನೇಕ ಪೀಳಿಗೆಗಳಿಗೆ ಸ್ಫೂರ್ತಿಯಾಗಿದ್ದವು. ಸಮಾಜದೊಂದಿಗೆ ಮುಖಾಮುಖಿಯಾಗುವಂತೆ ಪ್ರೇರೇಪಿಸಿದ್ದವು’ ಎಂದು ಶೋಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.