ADVERTISEMENT

ಗೋವು ಕಳ್ಳಸಾಗಣೆ ಮಾಡುವವರಿಗೆ ಥಳಿಸಿ ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ತಿಳಿಸಿ 

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 2:10 IST
Last Updated 31 ಜುಲೈ 2018, 2:10 IST
ಗ್ಯಾನ್ ದೇವ್ ಅಹುಜಾ (ಕೃಪೆ: ಫೇಸ್‍ಬುಕ್)
ಗ್ಯಾನ್ ದೇವ್ ಅಹುಜಾ (ಕೃಪೆ: ಫೇಸ್‍ಬುಕ್)   

ಜೈಪುರ: ಗೋವು ಕಳ್ಳಸಾಗಣೆ ಮಾಡುವವರು ಸಿಕ್ಕಿದರೆ ಅವರಿಗೆ ಥಳಿಸಿಮರಕ್ಕೆ ಕಟ್ಟಿ ಹಾಕಿದ ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇವರು ಕಳ್ಳ ಸಾಗಣೆ ಮಾಡುವ ವ್ಯಕ್ತಿಗಳು ಸಿಕ್ಕರೆ ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆಯಿರಿ.ಗುದ್ದು ನೀಡಿ ಆಮೇಲೆ ಮರಕ್ಕೆ ಕಟ್ಟಿ ಹಾಕಿ, ನಂತರ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಈ ಬಗ್ಗೆ ಸೋಮವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅಹುಜಾ, ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಈ ರೀತಿ ಹೇಳಿದ್ದೇನೆ ಎಂದಿದ್ದಾರೆ.

ಗೋವು ಕಳ್ಳಸಾಗಣೆ ಮಾಡುವವರ ಮೇಲೆ ತೀವ್ರ ಹಲ್ಲೆ ಮಾಡಬೇಡಿ. ಇದರ ಬದಲು ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆದು, ಅವರು ಅಲ್ಲಿಂದ ತಪ್ಪಿಸಿಕೊಳ್ಳದಂತೆ ಮರಕ್ಕೆ ಕಟ್ಟಿಹಾಕಿ.ಪೊಲೀಸರಿಗೆ ತಿಳಿಸಿದರೆ ಅವರುಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.ಯಾರೊಬ್ಬರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ.

ADVERTISEMENT

ರಾಜಸ್ಥಾನದ ಅಲ್ವಾರ್‍‍ನಲ್ಲಿ ರಖ್ಬರ್ ಖಾನ್ ಅಲಿಯಾಲ್ ಅಕ್ಬರ್ ಎಂಬ ವ್ಯಕ್ತಿ ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದರೆಂದು ಶಂಕಿಸಿ ಗೋರಕ್ಷಕರ ಗುಂಪೊಂದು ಜುಲೈ 20ರಂದು ಹೊಡೆದು ಸಾಯಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಮೂವರು ವ್ಯಕ್ತಿಗಳು ನಿರಪರಾಧಿಗಳಾಗಿದ್ದಾರೆ. ಪೊಲೀಸರೇ ಆ ವ್ಯಕ್ತಿಗಳ ಮೇಲೆ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾರೆ ಎಂದಿದ್ದಾರೆ ಅಹುಜಾ,.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.