ADVERTISEMENT

ಕೇಂದ್ರ ಸರ್ಕಾರದ ಸೂಚನೆ: ವಿವಿಧ ಪೋಸ್ಟ್‌ ಕೈಬಿಟ್ಟ ಜಾಲತಾಣಗಳು

ಪಿಟಿಐ
Published 25 ಏಪ್ರಿಲ್ 2021, 22:05 IST
Last Updated 25 ಏಪ್ರಿಲ್ 2021, 22:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಂತೆ ಟ್ವಿಟರ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿದ್ದ ಸುಮಾರು 100 ಪೋಸ್ಟ್‌ಗಳನ್ನು ಕೇಂದ್ರ ಸರ್ಕಾರದ ವಿನಂತಿ ಮೇರೆಗೆ ಆಯಾ ಜಾಲತಾಣ ವೇದಿಕೆಗಳಿಂದ ತೆಗೆಯಲಾಗಿದೆ.

ದೇಶದಲ್ಲಿ ಉದ್ಭವಿಸಿರುವ ವೈದ್ಯಕೀಯ ಬಿಕ್ಕಟ್ಟು ಅಥವಾ ನಕಲಿ ಸುದ್ದಿಗಳನ್ನು ತೆಗೆಯಲಾಗಿದೆ ಎಂದು ತಿಳಿಸಲಾಗಿದೆ. ‘ಹೀಗೇ ತೆಗೆಯಲಾದ ಪೋಸ್ಟ್‌ಗಳ ಬಗ್ಗೆ ಆಯಾ ಖಾತೆದಾರರಿಗೆ, ಕಾನೂನ ಪ್ರಕಾರ ಸರ್ಕಾರದ ಕೋರಿಕೆಯಂತೆ ಈ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ’ ಎಂದು ಟ್ವಿಟರ್ ತಿಳಿಸಿದೆ.

ಆದರೆ, ತೆಗೆಯಲಾಗಿರುವ ಪೋಸ್ಟ್‌ಗಳು ಯಾವುವು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸರ್ಕಾರದ ಮೂಲಗಳ ಪ್ರಕಾರ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಗೃಹ ಸಚಿವಾಲಯದ ಶಿಫಾರಸು ಆಧರಿಸಿ, ಜಾಲತಾಣಗಳ ಆಡಳಿತಗಳಿಗೆ ಪೋಸ್ಟ್‌ ಮತ್ತು ಯುಆರ್‌ಎಲ್‌ಗಳನ್ನು ತೆಗೆಯುವಂತೆ ಸೂಚಿಸಿತ್ತು.

ADVERTISEMENT

ಕೆಲವು ಖಾತೆದಾರರು ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿಯನ್ನು ಜನತೆಗೆ ರವಾನಿಸುತ್ತಿದ್ದರು ಇದು, ಸಮಾಜದಲ್ಲಿ ಗೊಂದಲ ಮೂಡಲು ಕಾರಣವಾಗಿತ್ತು. ಸಂಬಂಧವಿಲ್ಲದ, ಹಳೆಯದಾದ, ಸಂದರ್ಭಕ್ಕೆ ಸೂಕ್ತವಲ್ಲದ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಇವು ಒಟ್ಟಾರೆ ಕೋವಿಡ್ ನಿರ್ವಹಣೆಯ ಶಿಷ್ಟಾಚಾರಕ್ಕೂ ವಿರುದ್ಧವಾಗಿತ್ತು ಎಂದು ಮೂಲಗಳು ವಿವರಿಸಿವೆ.

ಕೊರೊನಾ ನಿರ್ವಹಣೆ ಕುರಿತ ಟೀಕೆಯನ್ನು ಹೊಂದಿದ್ದ ಪೋಸ್ಟ್‌ಗಳು ಸೇರಿದಂತೆ ಸುಮಾರು 50 ಪೋಸ್ಟ್‌ಗಳನ್ನು ಟ್ವಿಟರ್‌ ತೆಗೆದುಹಾಕಿದೆ. ಸರ್ಕಾರದ ಆದೇಶದಂತೆ ಕಳೆದ ತಿಂಗಳು 500ಕ್ಕೂ ಅಧಿಕ ಖಾತೆಗಳನ್ನು ಅಮಾನತಿನಲ್ಲಿ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.