ADVERTISEMENT

ವಾಂಗ್ಚುಕ್ ಶೀಘ್ರ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪತ್ನಿ

ಪಿಟಿಐ
Published 3 ಅಕ್ಟೋಬರ್ 2025, 4:39 IST
Last Updated 3 ಅಕ್ಟೋಬರ್ 2025, 4:39 IST
<div class="paragraphs"><p>ಸೋನಮ್ ವಾಂಗ್ಚುಕ್</p></div>

ಸೋನಮ್ ವಾಂಗ್ಚುಕ್

   

ಪಿಟಿಐ

ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿರುವ ಪರಸರ ಕಾರ್ತಕರ್ತ ಸೋನಮ್ ವಾಂಗ್ಚುಕ್ ಬಿಡುಗಡೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್‌ಮೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ADVERTISEMENT

ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಪರಿಚ್ಚೇದಕ್ಕೆ ಸೇರಿಸಲು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 4 ಮಂದಿ ಮೃತಪಟ್ಟು, 90 ಮಂದಿ ಗಾಯಗೊಂಡಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ಸೆಪ್ಟೆಂಬರ್ 26ರಂದು ಸೋನಮ್ ಅವರನ್ನು ಬಂಧಿಸಲಾಗಿತ್ತು.

ವಕೀಲ ಸರ್ವಂ ರೀಟಂ ಖಾರೆ ಅವರ ಮೂಲಕ ಅರ್ಜಿ ಸಲ್ಲಿಸಿರುವ ಅಂಗ್‌ಮೊ, ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿದ್ದಾರೆ, ಅಲ್ಲದೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ. ಜೊತೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಕಿರುವುದನ್ನೂ ಪ್ರಶ್ನೆ ಮಾಡಿದ್ದಾರೆ.

ವಾಂಗ್ಚುಕ್ ಅವರನ್ನು ಬಂಧನದ ಆದೇಶ ಪ್ರತಿ ಇನ್ನೂ ನನ್ನ ಕೈಸೇರಿಲ್ಲ, ಅವರೊಂದಿಗೆ ಸಂಪರ್ಕವೂ ಇಲ್ಲ ಎಂದು ಅಂಗ್‌ಮೊ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.