ADVERTISEMENT

ಅಂಚೆಮತ ಆಧಾರದಲ್ಲಿ ಎಸ್‌ಪಿಗೆ 304 ಕಡೆ ಗೆಲುವು: ಅಖಿಲೇಶ್

ಪಿಟಿಐ
Published 15 ಮಾರ್ಚ್ 2022, 21:42 IST
Last Updated 15 ಮಾರ್ಚ್ 2022, 21:42 IST
ಅಖಿಲೇಶ್
ಅಖಿಲೇಶ್   

ಲಖನೌ: ಸಮಾಜವಾದಿ ಪಕ್ಷ (ಎಸ್‌ಪಿ) ನೇತೃತ್ವದ ಮೈತ್ರಿಕೂಟವು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 51.5ರಷ್ಟು ಅಂಚೆ ಮತಗಳನ್ನು ಪಡೆದಿದೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮಂಗಳವಾರ ಹೇಳಿದ್ದಾರೆ.

ಚಲಾವಣೆಯಾದ ಅಂಚೆ ಮತಪತ್ರಗಳ ಆಧಾರದಲ್ಲಿ ಹೇಳುವುದಾದರೆ ಸಮಾಜವಾದಿ ಪಕ್ಷವು 304 ಕ್ಷೇತ್ರಗಳಲ್ಲಿ ಗೆದ್ದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಎಸ್‌ಪಿ ನೇತೃತ್ವದ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದಿದೆ ಎಂಬ ಸತ್ಯವನ್ನು ಇದು ಸ್ಪಷ್ಟಪಡಿಸುತ್ತದೆ. ಅಂಚೆ ಮತಪತ್ರಗಳ ಮೂಲಕ ಪಕ್ಷದ ಪರವಾಗಿ ಮತ ಹಾಕಿದ ಸರ್ಕಾರಿ ನೌಕರರು, ಶಿಕ್ಷಕರು ಹಾಗೂ ಮತದಾರರಿಗೆ ಧನ್ಯವಾದ’ ಎಂದು ಅಖಿಲೇಶ್ ಹೇಳಿದ್ದಾರೆ.

ADVERTISEMENT

255 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮೋಸದಾಟವು ಯಾವುದೇ ಶಕ್ತಿಯನ್ನು ನೀಡುವುದಿಲ್ಲ ಎಂಬುದನ್ನುಆಡಳಿತಾರೂಢ ಪಕ್ಷ ಅರಿಯಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.