ADVERTISEMENT

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಂಡತಿ ಇನ್, ತಂದೆ ಔಟ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 9:52 IST
Last Updated 24 ಮಾರ್ಚ್ 2019, 9:52 IST
ಮುಲಾಯಂ ಡಿಂಪಲ್ ಅಖಿಲೇಶ್ 
ಮುಲಾಯಂ ಡಿಂಪಲ್ ಅಖಿಲೇಶ್    

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಪತ್ನಿಯನ್ನು ಸೇರಿಸಿಕೊಂಡು ತಂದೆಯನ್ನೇ ಕೈಬಿಟ್ಟಿದ್ದಾರೆ.

ಹೀಗೊಂದು ಬದಲಾವಣೆಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲಿ ನಡೆದಿದೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಖಿಲೇಶ್ ಯಾದವ್, ರಾಮ್‌ಗೋಪಾಲ್ ಯಾದವ್, ಆಜಂಖಾನ್, ಅಮಿತಾಬ್ ಬಚ್ಚನ್ ಪತ್ನಿ ಜಯಾಬಚ್ಚನ್, ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ತೇಜ್ ಪ್ರತಾಪ್ ಯಾದವ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ, ಮುಲಾಯಂಸಿಂಗ್ ಯಾದವ್ ಅವರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ.

ADVERTISEMENT

ತಂದೆ ಕ್ಷೇತ್ರ ಆಯ್ಕೆ

ಅಖಿಲೇಶ್ ಯಾದವ್ ತಂದೆಯ ಕ್ಷೇತ್ರವಾದ ಆಜಂಘರ್‌ನಿಂದಈ ಬಾರಿಸ್ಪರ್ಧಿಸಲಿದ್ದಾರೆ.ಈ ಸಂಬಂಧ ಭಾನುವಾರ ಪಕ್ಷದ ಅಧಿಕೃತ ಟ್ವಿಟರ್ ನಲ್ಲಿ ಪ್ರಕಟಣೆ ಹೊರಬಿದ್ದಿದೆ. ಉತ್ತರಪ್ರದೇಶದ ಆಜಂಘರ್ ಕ್ಷೇತ್ರದಿಂದ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್ 2014ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ನಂತರ ರಾಜೀನಾಮೆ ನೀಡಿದ್ದರು.ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವ ಪಕ್ಷವು ಮತ್ತೊಬ್ಬ ಅಭ್ಯರ್ಥಿ ಆಜಂಖಾನ್ ಅವರು ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದೆ. ಆಜಂಖಾನ್ ಪ್ರಸ್ತುತ ರಾಂಪುರ ಕ್ಷೇತ್ರದ ಶಾಸಕರಾಗಿದ್ದಾರೆ.

ಅಲ್ಲದೆ, ಮುಲಾಯಂ ಸಿಂಗ್ ಯಾದವ್ ಕೂಡ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಮೇನ್‌ಪುರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಬೆಳವಣಿಗೆಯಿಂದಾಗಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಎದ್ದಿದ್ದ ಅನುಮಾನಗಳಿಗೆ ತೆರೆಬಿದ್ದಿದೆ. ಪಕ್ಷದ ಈ ಪ್ರಕಟಣೆಯಿಂದಾಗಿ ಅಖಿಲೇಶ್ ಯಾದವ್ ಅವರು ಕನೂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೂತೆರೆಬಿದ್ದಿದೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಕೂಡ ಸ್ಪರ್ಧಿಸಲಿದ್ದು, ಮಾರ್ಚ್ 8 ರಂದು ಪ್ರಕಟವಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಿಂಪಲ್‌ರ ಹೆಸರಿದೆ.

ಅಖಿಲೇಶ್ ಯಾದವ್ ಅವರು ಸ್ಪರ್ಧಿಸುತ್ತಿರುವ ಆಜಂಘರ್ ಕ್ಷೇತ್ರವು ಸಮಾಜವಾದಿ ಪಕ್ಷಕ್ಕೆ ನಿರಾಯಾಸ ಗೆಲುವು ತಂದುಕೊಡುತ್ತಿರುವ ಕ್ಷೇತ್ರ ಎನ್ನಲಾಗಿದೆ. ಹೀಗಾಗಿಯೇ ಅಖಿಲೇಶ್ ಯಾದವ್ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ರಾಜ್ಯದ ಉಳಿದ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.