ADVERTISEMENT

1.5 ಕಿ.ಮೀ. ಅಂತರದಲ್ಲಿ ಸ್ಪೇಡೆಕ್ಸ್‌ ಉಪಗ್ರಹಗಳು: ಇಸ್ರೊ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 16:36 IST
Last Updated 10 ಜನವರಿ 2025, 16:36 IST
–
   

ಚೆನ್ನೈ: ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯೋಗ ಉದ್ದೇಶದಿಂದ ‘ಸ್ಪೇಡೆಕ್ಸ್‌’ ಯೋಜನೆಯಡಿ ಉಡ್ಡಯನ ಮಾಡಿರುವ ಎರಡು ಉಪಗ್ರಹಗಳು ಶುಕ್ರವಾರ ರಾತ್ರಿ 1.5 ಕಿ.ಮೀ. ಅಂತರದಲ್ಲಿದ್ದವು ಎಂದು ಇಸ್ರೊ ತಿಳಿಸಿದೆ.

‘ಶನಿವಾರದ ಬೆಳಿಗ್ಗೆ ವೇಳೆಗೆ, ಈ ಉಪಗ್ರಹಗಳ ನಡುವಿನ ಅಂತರ 500 ಮೀಟರ್‌ ಇರುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

ಅವುಗಳ ನಡುವಿನ ಅಂತರವನ್ನು ಮೊದಲು 15 ಮೀಟರ್‌ಗೆ, ನಂತರ 3 ಮೀಟರ್‌ಗೆ ಇಳಿಸಿ, ಜೋಡಣೆ ಮಾಡುವ (ಡಾಕಿಂಗ್) ಯೋಜನೆ ರೂಪಿಸಲಾಗಿದೆ. ಆದರೆ, ‘ಡಾಕಿಂಗ್‌’ ಯಾವಾಗ ಕಾರ್ಯಗತವಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ADVERTISEMENT

ಎರಡೂ ಉಪಗ್ರಹಗಳನ್ನು ಜ.7ರಂದು ಜೋಡಿಸಲು (ಡಾಕಿಂಗ್) ಇಸ್ರೊ ಯೋಜಿಸಿತ್ತು. ಅವುಗಳ ನಡುವಿನ ಅಂತರ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಇದ್ದ ಕಾರಣ, ಈ ಕಾರ್ಯವನ್ನು ಜ.9ಕ್ಕೆ ಮುಂದೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.