ADVERTISEMENT

ಪ್ರಧಾನಮಂತ್ರಿಗಳ ವಿಶೇಷ ಭದ್ರತಾ ಪಡೆ ಮುಖ್ಯಸ್ಥ ಅರುಣ್ ಕುಮಾರ್ ಸಿನ್ಹಾ ನಿಧನ

ಪಿಟಿಐ
Published 6 ಸೆಪ್ಟೆಂಬರ್ 2023, 7:52 IST
Last Updated 6 ಸೆಪ್ಟೆಂಬರ್ 2023, 7:52 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ಪ್ರಧಾನಿಗೆ ಭದ್ರತೆ ಒದಗಿಸುವ ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ನಿರ್ದೇಶಕರಾಗಿದ್ದ ಅರುಣ್‌ ಕುಮಾರ್ ಸಿನ್ಹಾ (61) ಬುಧವಾರ ಗುರುಗ್ರಾಮ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯಕ್ಕೀಡಾಗಿದ್ದ ಸಿನ್ಹಾ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೇರಳ ಕೇಡರ್‌ನ 1987ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಸಿನ್ಹಾ ಅವರ ಸೇವೆಯನ್ನು ಮೇ 31ರಂದು ಒಂದು ವರ್ಷ ವಿಸ್ತರಿಸಲಾಗಿತ್ತು.

ಕೇರಳ ಪೊಲೀಸ್‌ ಇಲಾಖೆಯಲ್ಲಿ ಮತ್ತು ಕೇಂದ್ರದ ಗಡಿ ಭದ್ರತಾ ಪಡೆಯ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದ ಸಿನ್ಹಾ, 2016ರ ಮಾರ್ಚ್‌ನಲ್ಲಿ ಎಸ್‌ಪಿಜಿಯ 12ನೇ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇವರ ಸೇವಾವಧಿ 2024ರ ಮೇ 31ರವರೆಗಿತ್ತು.

ಭಾರತೀಯ ಪೊಲೀಸ್ ಸೇವೆ (ಐಪಿಎಸ್‌) ಅಸೋಸಿಯೇಷನ್ ಸಿನ್ಹಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.