ADVERTISEMENT

ಕಾಶ್ಮೀರದಲ್ಲಿ ಪೊಲೀಸರ ಹತ್ಯೆ; ಪೊಲೀಸರ ರಾಜೀನಾಮೆ ವಿಡಿಯೊ ಸತ್ಯಕ್ಕೆ ದೂರವಾದುದು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 11:43 IST
Last Updated 21 ಸೆಪ್ಟೆಂಬರ್ 2018, 11:43 IST
   

ಶ್ರೀನಗರ: ದಕ್ಷಿಣ ಕಾಶ್ಮೀರದ ಕರ್ಪಾನ್ ಗ್ರಾಮದಲ್ಲಿ ಉಗ್ರರು ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಅಲ್ಲಿನ ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ಘೋಷಿಸಿರುವ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ವಿಡಿಯೊವೊಂದರಲ್ಲಿ ದಕ್ಷಿಣ ಕಾಶ್ಮೀರದ ಸಮ್ನೂ ಎಂಬಲ್ಲಿ ಶಬೀರ್ ಅಹ್ಮದ್ ಥೋಕರ್ ಎಂಬ ವ್ಯಕ್ತಿ ತಾನು 8 ವರ್ಷಗಳಿಂದ ವಿಶೇಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಈಗ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.ತಾನು ಯಾವುದೇ ಒತ್ತಡಕ್ಕೊಳಗಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ ವಿಶೇಷ ಪೊಲೀಸ್ ಅಧಿಕಾರಿಗಳು ಯಾರೂ ರಾಜೀನಾಮೆ ನೀಡಿಲ್ಲ.ಇಂಥಾ ಸುದ್ದಿಗಳು ಸತ್ಯಕ್ಕೆ ದೂರವಾದುದು ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಅದೇ ವೇಳೆ ಕಿಡಿಗೇಡಿಗಳು ಇಂಥಾ ಸುಳ್ಳು ವಿಡಿಯೊಗಳನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.

ADVERTISEMENT

ಏನಿದು ರಾಜೀನಾಮೆ ವಿಡಿಯೊ?
ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆಗೈದ ನಂತರ ವಿಡಿಯೊವೊಂದನ್ನು ಹರಿಬಿಟ್ಟಿದ್ದರು.ಈ ವಿಡಿಯೊದಲ್ಲಿ ರಾಜೀನಾಮೆ ನೀಡಿ ಇಲ್ಲವೇ ಸಾಯಿರಿ ಎಂದು ಹೇಳಲಾಗಿತ್ತು. ಇದಾದ ನಂತರ 6 ಮಂದಿ ಪೊಲೀಸರು ರಾಜೀನಾಮೆ ನೀಡಿರುವ ನಿರ್ಧಾರದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ನನ್ನ ಹೆಸರು ನವಾಜ್ ಅಹಮದ್ ಲೋನ್, ಕುಲ್ಗಾಂ ನಿವಾಸಿ. ನಾನು ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದೇನೆ.ನಾನು ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ.ಈ ತೀರ್ಮಾನ ತೆಗೆದುಕೊಂಡಿರುವುದು ಯಾವುದೇ ಒತ್ತಡದಿಂದ ಅಲ್ಲ ಎಂದು ವಿಡಿಯೊವೊಂದರಲ್ಲಿ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ 6 ವರ್ಷಗಳ ಕಾಲ ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದ ತಾನು 17ನೇ ತಾರೀಖಿಗೆ ರಾಜೀನಾಮೆ ನೀಡಿದ್ದು, ಪೊಲೀಸ್ ಇಲಾಖೆಯೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.