ADVERTISEMENT

ಮುಂಬೈ ರೈಲು ಸ್ಪೋಟ: ವರದಿಯ ಬಗ್ಗೆ ಅಫಿಡೆವಿಟ್‌ನಲ್ಲಿ ದಾಖಲಿಲು ಐಬಿಗೆ ನಿರ್ದೇಶನ

ಪಿಟಿಐ
Published 27 ಜನವರಿ 2021, 12:00 IST
Last Updated 27 ಜನವರಿ 2021, 12:00 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: 2006ರ ಮುಂಬೈನ ಸರಣಿ ರೈಲು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2009ರಲ್ಲಿ ಯಾವುದೇ ವರದಿಯನ್ನು ಸಿದ್ಧಪಡಿಸಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಗುಪ್ತಚರ ಇಲಾಖೆಗೆ (ಐಬಿ) ನಿರ್ದೇಶನ ನೀಡಿದೆ.

ಮುಂಬೈನ ವೆಸ್ಟರ್ಸ್‌ ಲೈನ್‌ನಲ್ಲಿ ಸಂಚರಿಸುವ ರೈಲುಗಳಲ್ಲಿ 2006ರ ಜುಲೈ 11ರಂದು ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟ ನಡೆದು, 189 ಮಂದಿ ಮೃತಪಟ್ಟಿದ್ದರು. 829 ಮಂದಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಎಹ್ತೇಶಾಮ್‌ ಕುತ್ಬುದ್ದೀನ್‌ ಸಿದ್ದಿಖಿ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

ಮಾಹಿತಿ ಹಕ್ಕು ಕಾಯಿದೆಯಡಿ ವರದಿ ಬಹಿರಂಗಪಡಿಸುವುದರಿಂದ ವಿನಾಯಿತಿ ಪಡೆದಿರುವುದಾಗಿ ಇದೇ ವಿಷಯದ ಬಗ್ಗೆ ಈ ಹಿಂದಿನ ವಿಚಾರಣೆಯ ವೇಳೆ ಗುಪ್ತಚರ ಸಂಸ್ಥೆಯು ನ್ಯಾಯಾಲಯಕ್ಕೆ ತಿಳಿಸಿದ್ದಾಗಿ, ನ್ಯಾ.ಪ್ರತಿಭಾ ಸಿಂಗ್‌ ಅವರು ನಿರ್ದೇಶನ ನೀಡುವ ಸಂದರ್ಭದಲ್ಲಿ ತಿಳಿಸಿದರು.

ADVERTISEMENT

‘ನಿಮ್ಮ (ಐಬಿ) ನಿಲುವಿನಲ್ಲಿ ವಿರೋಧಾಭಾಸಗಳಿವೆ. ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ ಐಬಿ 2009ರಲ್ಲಿ ಅಥವಾ ನಂತರ ಯಾವುದೇ ವರದಿ ಸಿದ್ಧಪಡಿಸಿ, ಆಗಿನ ಗೃಹ ಸಚಿವರಿಗೆ ಒಪ್ಪಿಸಿಸಲಾಗಿದೆಯೇ ಎಂಬುದನ್ನು ಈ ನ್ಯಾಯಾಲಯದ ಮುಂದೆ ಪ್ರಮಾಣಪತ್ರದ ಮೂಲಕ ತಿಳಿಸಲಿ. ನಾಲ್ಕು ವಾರಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು‘ ಎಂದು ನ್ಯಾಯಾಲಯ ಹೇಳಿತು.

ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಏಪ್ರಿಲ್‌ 13 ರಂದು ನಿಗಡಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.