ADVERTISEMENT

ಜಾಗತಿಕ ನೆರವಿನಿಂದ ರಾಜ್ಯಗಳಿಗೆ 19 ಆಮ್ಲಜನಕ ಉತ್ಪಾದನಾ ಘಟಕ: ಕೇಂದ್ರ

ಪಿಟಿಐ
Published 22 ಮೇ 2021, 18:01 IST
Last Updated 22 ಮೇ 2021, 18:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಗಳ ನೆರವಿನಿಂದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏ. 27ರಿಂದ ಇದುವರೆಗೆ ಒಟ್ಟು 19 ಆಮ್ಲಜನಕ ಉತ್ಪಾದನಾ ಘಟಕ, 16,530 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳು, 15,901 ಆಮ್ಲಜನಕ ಸಿಲಿಂಡರ್‌ಗಳು ಹಾಗೂ ಸುಮಾರು 6.6 ಲಕ್ಷ ರೆಮ್‌ಡಿಸಿವಿರ್ ಔಷಧಿಯ ಬಾಟಲಿಗಳನ್ನು ತಲುಪಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಶನಿವಾರ ತಿಳಿಸಿದೆ.

ಕೇಂದ್ರ ಸರ್ಕಾರವು ಏ. 27ರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಹಕಾರದಿಂದಾಗಿ ವಿವಿಧ ದೇಶಗಳು ಮತ್ತು ಸಂಸ್ಥೆಗಳಿಂದ ಕೋವಿಡ್‌–19 ವೈದ್ಯಕೀಯ ಸೌಲಭ್ಯ ಮತ್ತು ಸಲಕರಣೆಗಳ ನೆರವನ್ನು ಪಡೆಯುತ್ತಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಸೂಕ್ತ ಸಮಯಕ್ಕೆ ವೈದ್ಯಕೀಯ ಉಪಕರಣಗಳ ಸರಬರಾಜು ಆಗುತ್ತಿದೆ ಎಂದೂ ಆರೋಗ್ಯ ಸಚಿವಾಲಯವು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.