ADVERTISEMENT

ಮದ್ರಾಸ್ ಹೈಕೋರ್ಟ್‌ ಮೊರೆ ಹೋದ ಸ್ಟೆರ್‌ಲೈಟ್ ಕಂಪೆನಿ

ಮಾನವ ಸಂಪನ್ಮೂಲ, ವಿದ್ಯುತ್ ಸರಬರಾಜು ಕೋರಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 14:08 IST
Last Updated 20 ಜೂನ್ 2018, 14:08 IST
   

ಚೆನ್ನೈ: ತೂತುಕುಡಿಯಲ್ಲಿರುವ ವೇದಾಂತ ಸಮುಹದ ಸ್ಟೆರ್‌ಲೈಟ್ ಕಾಪರ್ ಕಂಪನಿ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದು, ಕಾರ್ಖಾನೆ ನಡೆಸಲು ಅವಶ್ಯಕವಾದಮಾನವ ಸಂಪನ್ಮೂಲ ಹಾಗೂ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದೆ.

ಕಾರ್ಖಾನೆಯಲ್ಲಿ ಸೋರಿಕೆಯಾಗಿರುವ ಗಂಧಕಾಮ್ಲ ಸ್ವಚ್ಛಗೊಳಿಸುವಕಾರ್ಯ ಜೂನ್ 18ರಿಂದ ಪ್ರಾರಂಭವಾಗಿದೆ. ಕಾರ್ಖಾನೆಗೆ ಸಿಬ್ಬಂದಿ, ಹಾಗೂ ವಿದ್ಯುತ್ ಅಗತ್ಯತೆ ಇದೆ ಎಂದು ಮಧುರೈ ಪೀಠಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, ಸ್ಥಳೀಯರ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

ಕಳೆದ ತಿಂಗಳು ಸ್ಟೆರ್‌ಲೈಟ್ ಕಂಪೆನಿ ವಿರುದ್ಧ ಸ್ಥಳಿಯರು ಕೈಗೊಂಡ ಪ್ರತಿಭಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.