ADVERTISEMENT

ನಾಯಿ ಅಡ್ಡ ಬಂದು ಅಪಘಾತ: 9 ವರ್ಷಗಳ ಬಳಿಕ ಸಿಕ್ಕ ಪರಿಹಾರ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 11:54 IST
Last Updated 3 ಜುಲೈ 2020, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ:ಬೀದಿ ನಾಯಿ ಅಡ್ಡ ಬಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಒಂಬತ್ತು ವರ್ಷಗಳ ನಂತರ ₹ 18 ಲಕ್ಷ ಪರಿಹಾರ ದೊರಕಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.

ಸುಪ್ರೀಂ ಕೋರ್ಟ್ ನೇಮಕ ಸಮಿತಿಯ ಶಿಫಾರಸ್ಸಿನಮೇರೆಗೆ ಒಟ್ಟಪಾಲಂ ಪುರಸಭೆಯು ಮೃತರ ಪತ್ನಿಫಾತೀಮಾ ಅವರಿಗೆ ಪರಿಹಾರ ಮೊತ್ತವನ್ನು ನೀಡಿದೆ.

ಜವಳಿ ವ್ಯಾಪಾರದಲ್ಲಿದ್ದ ಸೈದಲವಿ ಅವರು 2011 ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ವಾಹನಗಳ ನಡುವೆ ಡಿಕ್ಕಿ ಸಂಭವಿಸದ ಕಾರಣವಾಹನ ವಿಮಾ ಸಂಸ್ಥೆ ಪರಿಹಾರ ನೀಡಲು ನಿರಾಕರಿಸಿತ್ತು.

ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಮೃತರ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಿದ್ದರು.ಬೀದಿ ನಾಯಿ ಹಾವಳಿಯ ಕುರಿತು ಅಧ್ಯಯನ ಮತ್ತು ಪರಿಹಾರಗಳನ್ನು ಶಿಫಾರಸು ಮಾಡಲು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಿರಿ ಜಗನ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ‘ಗಾಯಗಳ ಸ್ವರೂಪ ಮತ್ತುಗಾಯಗೊಂಡವರಿಗೆ ಮತ್ತು ಅವರನ್ನು ಅವಲಂಬಿಸಿರುವವರಿಗೆ ಉಂಟಾಗುವ ನಷ್ಟವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಲಾಗಿದೆ’ ಎಂದುನ್ಯಾಯಮೂರ್ತಿ ಜಗನ್ ತಿಳಿಸಿದ್ದಾರೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಇದ್ದರೂ, ಪುರಸಭೆ ಅಧಿಕಾರಿಗಳು ಈ ಆದೇಶದ ಪಾಲನೆಗೆ ಸಮ್ಮತಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.