ADVERTISEMENT

‘ಸಮವಸ್ತ್ರ ತೆಗೆಯಲು ಹೇಳಿದ್ದಕ್ಕೆ ನೊಂದು ಬೆಂಕಿ ಹಚ್ಚಿಕೊಂಡ ಬಾಲಕಿ’

ಪಿಟಿಐ
Published 14 ಅಕ್ಟೋಬರ್ 2022, 18:55 IST
Last Updated 14 ಅಕ್ಟೋಬರ್ 2022, 18:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೆಮ್‌ಶೆಡ್‌ಪುರ, ಜಾರ್ಖಂಡ: ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಶಂಕೆ ಮೇಲೆ ಸಮವಸ್ತ್ರ ಕಳಚುವಂತೆ ಕೊಠಡಿ ಮೇಲ್ವಿಚಾರಕಿ ಬಲವಂತ ಮಾಡಿದ್ದಕ್ಕಾಗಿ ನೊಂದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾದ ಘಟನೆ ನಡೆದಿದೆ.

ತೀವ್ರ ಸುಟ್ಟಗಾಯಗಳಾಗಿರುವ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಕಲು ಮಾಡುವುದಕ್ಕಾಗಿ ಚೀಟಿಗಳನ್ನು ತಂದು, ಅವುಗಳನ್ನು ನಾನು ಸಮವಸ್ತ್ರದಲ್ಲಿ ಬಚ್ಚಿಟ್ಟಿಕೊಂಡಿದ್ದೇನೆ ಎಂದು ಶಂಕಿಸಿದ ಮೇಲ್ಚಿಚಾರಕಿ, ಪರಿಶೀಲಿಸಲು ನನ್ನನ್ನು ಪರೀಕ್ಷಾ ಕೊಠಡಿ ಪಕ್ಕದ ಕೋಣೆಗೆ ನನ್ನನ್ನು ಕರೆದೊಯ್ದರು. ನನ್ನ ಭಾರಿ ಪ್ರತಿರೋಧ ಒಡ್ಡಿದೆ. ಆದರೂ, ಅವರು ನನ್ನ ಸಮವಸ್ತ್ರ ತೆಗೆಸಿದರು’ ಎಂದು ಅಧಿಕಾರಿಗಳೀಗೆ ಬಾಲಕಿ ಹೇಳಿಕೆ ನೀಡಿದ್ದಾಳೆ.

ADVERTISEMENT

ಪರೀಕ್ಷಾ ಮೇಲ್ವಿಚಾರಣೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.