ADVERTISEMENT

ಮಾತೃಭಾಷೆಯಲ್ಲಿ ಶಿಕ್ಷಣದಿಂದ ಹೆಚ್ಚಿನ ಜ್ಞಾನ ವೃದ್ಧಿ: ಸಿಜೆಐ ಬಿ.ಆರ್‌ ಗವಾಯಿ

ಪಿಟಿಐ
Published 6 ಜುಲೈ 2025, 15:55 IST
Last Updated 6 ಜುಲೈ 2025, 15:55 IST
ಭೂಷಣ್‌ ಗವಾಯಿ 
ಭೂಷಣ್‌ ಗವಾಯಿ    

ಮುಂಬೈ: ಮಾತೃಭಾಷೆಯಲ್ಲಿ ಶಿಕ್ಷಣ ಪಡೆವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಇದು ನಮ್ಮ ಜೀವನದಲ್ಲಿ ಮೌಲ್ಯಗಳನ್ನು ತುಂಬುತ್ತದೆ ಎಂದು ಸಿಜೆಐ ಬಿ.ಆರ್‌ ಗವಾಯಿ ಹೇಳಿದರು.

ಮುಂಬೈಯಲ್ಲಿ ತಾವು ಕಲಿತ ಚಿಕಿತ್ಸಕ್‌ ಸಮೂಹ್‌ ಶಿರೋಡ್ಕರ್‌ ಶಾಲೆಗೆ ಭೇಟಿ ನೀಡಿದ್ದ ಗವಾಯಿ ಅವರು ತಮ್ಮ ಹಳೆಯ ಸಹಪಾಠಿಗಳೊಂದಿಗೆ ಮಾತನಾಡಿದರು.

ಈ ವೇಳೆ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದ ಅವರು, ‘ನನ್ನ ಜೀವನವನ್ನು ರೂಪಿಸಿದ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ. ನಾನು ನನ್ನ ಮಾತೃಭಾಷೆ ಮರಾಠಿ ಮಾದ್ಯಮದಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ’ ಎಂದರು. 

ADVERTISEMENT

‘ಇಂದು ನಾನು ಯಾವುದೇ ಸ್ಥಾನ ತಲುಪಿದ್ದರೂ ಅದರಲ್ಲಿ ನನ್ನ ಶಿಕ್ಷಕರ ಹಾಗೂ ಈ ಶಾಲೆಯದ್ದು ಮಹತ್ವದ ಪಾತ್ರವಿದೆ. ಇಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳು ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿತು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.