ADVERTISEMENT

ಭಾರತ್‌ ಜೋಡೊ ಉಪ ಯಾತ್ರೆಗೆ ಚಾಲನೆ

ಪಿಟಿಐ
Published 31 ಅಕ್ಟೋಬರ್ 2022, 15:27 IST
Last Updated 31 ಅಕ್ಟೋಬರ್ 2022, 15:27 IST
ಜೈರಾಂ ರಮೇಶ್‌
ಜೈರಾಂ ರಮೇಶ್‌   

ನವದೆಹಲಿ : ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಭಾರತ್‌ ಜೋಡೊ ಉಪ ಯಾತ್ರೆಗೆ ಭುವನೇಶ್ವರದಲ್ಲಿ ಸೋಮವಾರ ಚಾಲನೆ ನೀಡಲಾಗಿದೆ. ಅಸ್ಸಾಂನಲ್ಲಿ ಆಯೋಜಿಸಲಾಗಿರುವ ಇದೇ ಮಾದರಿಯ ಮತ್ತೊಂದು ಯಾತ್ರೆಗೆ ಮಂಗಳವಾರ (ನ.1) ಹಸಿರು ನಿಶಾನೆ ದೊರೆಯಲಿದೆ.

ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (ಒಟ್ಟು 3,570 ಕಿ.ಮೀ) ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆ ಹಾದು ಹೋಗದೆ ಇರುವ ರಾಜ್ಯಗಳಲ್ಲಿ ಇದೇ ಮಾದರಿಯ ಉಪ ಯಾತ್ರೆಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

‘ಒಡಿಶಾದಲ್ಲಿ ಹಮ್ಮಿಕೊಳ್ಳಲಾಗಿರುವ ಯಾತ್ರೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆಯ ದಿನ (ಅ.31) ಚಾಲನೆ ನೀಡಲಾಗಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದ್ದು ಒಟ್ಟು 2,250 ಕಿ.ಮೀ. ಕ್ರಮಿಸಲಿದೆ. ಭುವನೇಶ್ವರದಲ್ಲೇ ಇದು ಕೊನೆಗೊಳ್ಳಲಿದೆ. ಅಸ್ಸಾಂನಲ್ಲಿ ನಿಗದಿಯಾಗಿರುವ ಯಾತ್ರೆಯು (830 ಕಿ.ಮೀ) ಗೋಲೊಕ್‌ಗಂಜ್‌ನಲ್ಲಿ ಆರಂಭವಾಗಲಿದೆ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜೈರಾಮ್‌ ರಮೇಶ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.