ADVERTISEMENT

ಮೋದಿಯಿಂದ ಪೋಪ್‌ಗೆ ಆಹ್ವಾನ: ಪ್ರಶಂಸೆಯೋ? ಕೀಳರಿಮೆಯೋ?: ಸುಬ್ರಮಣಿಯನ್‌ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 6:54 IST
Last Updated 17 ಜನವರಿ 2022, 6:54 IST
ಸುಬ್ರಮಣಿಯನ್‌ ಸ್ವಾಮಿ
ಸುಬ್ರಮಣಿಯನ್‌ ಸ್ವಾಮಿ   

ಚೆನ್ನೈ: ಪೋಪ್‌ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವುದು ಪ್ರಶಂಸೆಗಾಗಿಯೋ? ಅಥವಾ ಕೀಳರಿಮೆಯಿಂದಲೋ? ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ’ಕೂ’ ಮಾಡಿರುವ ಅವರು, ನವೆಂಬರ್‌ನಲ್ಲಿ ವ್ಯಾಟಿಕನ್‌ ಸಿಟಿಯ ಕ್ಯಾಥೋಲಿಕ್‌ ಪೋಪ್ ಮತ್ತು ನರೇಂದ್ರ ಮೋದಿ ನಡುವಿನ ಭೇಟಿ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಮನವಿ ಮಾಡಿದ್ದಾರೆಎಂದು ವ್ಯಾಟಿಕನ್‌ನಲ್ಲಿರುವ ನನ್ನ ಆಪ್ತರುಸಂದೇಶ ಕಳುಹಿಸಿದ್ದಾರೆಎಂದಿದ್ದಾರೆ.

ಹಿಂದುತ್ವವಾದಿ ಎಂದು ಕರೆಸಿಕೊಳ್ಳುವ ನಮ್ಮ ಪ್ರಧಾನಿಗಳು ಕ್ಯಾಥೋಲಿಕ್ ಪೋಪ್ ಅವರನ್ನು ಆಹ್ವಾನಿಸಿ ಪ್ರಶಂಸೆಗಾಗಿ ಯಾಕೆ ಒದ್ದಾಡುತ್ತಾರೆ? ಅಥವಾ ಕೀಳರಿಮೆಯೇ? ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ADVERTISEMENT

ಈ ಹಿಂದೆ 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.