ADVERTISEMENT

ಮಹಾರಾಷ್ಟ್ರ: ಸಂಭಾಜಿ ಭಿಡೆ ಪಾದಕ್ಕೆ ನಮಸ್ಕರಿಸಿ ಸುಧಾ ಮೂರ್ತಿ

ಪಿಟಿಐ
Published 8 ನವೆಂಬರ್ 2022, 15:22 IST
Last Updated 8 ನವೆಂಬರ್ 2022, 15:22 IST
   

ಮುಂಬೈ: ಇನ್ಫೊಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಹಾರಾಷ್ಟ್ರದ ಶಿವ ಪ್ರತಿಷ್ಠಾನದ ಸಂಸ್ಥಾಪಕ ಸಂಭಾಜಿ ಭಿಡೆ ಅವರ ಪಾದಕ್ಕೆ ನಮಸ್ಕರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಸುಧಾ ಅವರ ಪುಸ್ತಕಗಳು ಮರಾಠಿಗೆ ಭಾಷಾಂತರಗೊಂಡಿದ್ದು, ಅವುಗಳ ಪ್ರಚಾರ ಹಾಗೂ ಓದುಗರೊಂದಿಗೆ ಸಂವಾದ ನಡೆಸುವ ಸಲುವಾಗಿ ಅವರು ಸೋಮವಾರ ಸಾಂಗ್ಲಿಗೆ ಭೇಟಿ ನೀಡಿದ್ದರು.ಈ ವೇಳೆ ಸಂಭಾಜಿ ಅವರು ಸುಧಾ ಅವರನ್ನು ಭೇಟಿಯಾಗಿದ್ದರು.

‘ರಾಯಗಢ ಕೋಟೆಯಲ್ಲಿ ಚಿನ್ನದ ಸಿಂಹಾಸನ ಪ್ರತಿಷ್ಠಾಪನೆ ಮಾಡಲು ನೆರವು ನೀಡುವಂತೆ ಭಿಡೆ ಅವರು ಕೋರಿದ್ದಾರೆ’ ಎಂದು ಅವರ ಆಪ್ತರು ಹೇಳಿದ್ದಾರೆ.

ADVERTISEMENT

‘ಸುಧಾ ಅವರಿಗೆ ಭಿಡೆ ಅವರ ಪರಿಚಯ ಇರಲಿಲ್ಲ. ಹಿರಿಯರು ಎಂಬ ಕಾರಣಕ್ಕೆ ಅವರ ಪಾದಕ್ಕೆ ನಮಸ್ಕರಿಸಿದ್ದಾರೆ’ ಎಂದು ಸುಧಾ ಅವರ ಸಹಾಯಕರೊಬ್ಬರು ತಿಳಿಸಿದ್ದಾರೆ.

ಹಿಂದುತ್ವವಾದಿಯಾಗಿರುವ ಭಿಡೆ ಅವರು ಹಣೆಗೆ ಬೊಟ್ಟು ಇಟ್ಟಿಲ್ಲ ಎಂಬ ಕಾರಣಕ್ಕೆ ಪತ್ರಕರ್ತೆಯೊಬ್ಬರ ಜೊತೆ ಮಾತನಾಡಲು ನಿರಾಕರಿಸಿದ್ದರು. ಇದಕ್ಕಾಗಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.