ADVERTISEMENT

ಅಮರಾವತಿ: ವಿಐಟಿ ವಿದ್ಯಾರ್ಥಿಗೆ ವಾರ್ಷಿಕ ₹ 63 ಲಕ್ಷ ವೇತನದ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 11:04 IST
Last Updated 27 ಮಾರ್ಚ್ 2022, 11:04 IST
ಆಂಧ್ರಪ್ರದೇಶದ ಅಮರಾವತಿಯಲ್ಲಿರುವ ವೆಲ್ಲೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸುಧಾಂಶು ದೊಡ್ಡಿ ಅವರಿಗೆ ಅಮೆರಿಕದ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಲಭಿಸಿದ್ದಕ್ಕಾಗಿ ಇತ್ತೀಚೆಗೆ ವಿ.ವಿಯಲ್ಲಿ ಸನ್ಮಾನಿಸಲಾಯಿತು
ಆಂಧ್ರಪ್ರದೇಶದ ಅಮರಾವತಿಯಲ್ಲಿರುವ ವೆಲ್ಲೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸುಧಾಂಶು ದೊಡ್ಡಿ ಅವರಿಗೆ ಅಮೆರಿಕದ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಲಭಿಸಿದ್ದಕ್ಕಾಗಿ ಇತ್ತೀಚೆಗೆ ವಿ.ವಿಯಲ್ಲಿ ಸನ್ಮಾನಿಸಲಾಯಿತು   

ಅಮರಾವತಿ, ಆಂಧ್ರಪ್ರದೇಶ: ನಗರದಲ್ಲಿರುವ ವೆಲ್ಲೂರು ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ (ವಿಐಟಿ) ವಿಶ್ವವಿದ್ಯಾಲಯದ ಬಿ.ಟೆಕ್‌ (ಸಿಎಸ್‌ಇ) ವಿದ್ಯಾರ್ಥಿ ಸುಧಾಂಶು ದೊಡ್ಡಿ ಅವರು ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕ್ಯಾಂಪಸ್ ಸಂದರ್ಶನದಲ್ಲಿ ಅಮೆರಿಕ ಮೂಲದ ಪ್ರತಿಷ್ಠಿತ ಕಂಪನಿಗೆ ಆಯ್ಕೆಯಾಗಿದ್ದಾರೆ.

‘ಅನಲಿಟಿಕ್ಸ್‌ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಈ ಕಂಪನಿಯು ಸಂಸ್ಥೆಯ ವಿದ್ಯಾರ್ಥಿ ಸುಧಾಂಶು ಅವರಿಗೆ ವಾರ್ಷಿಕ ₹ 63 ಲಕ್ಷ ವೇತನ ನಿಗದಿ ಮಾಡಿದೆ’ ಎಂದು ವಿಐಟಿ ವಿ.ವಿ ಪ್ರಕಟಣೆ ತಿಳಿಸಿದೆ.

ಸಂಸ್ಥೆಯಲ್ಲಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ವಿ.ವಿಸಂಸ್ಥಾಪಕ ಮತ್ತು ಕುಲಾಧಿಪತಿ ಡಾ.ಜಿ.ವಿಶ್ವನಾಥನ್, ಕುಲಪತಿ ಡಾ.ಎಸ್‌.ವಿ.ಕೋಟಾರೆಡ್ಡಿ, ಕೆರಿಯರ್ ಡೆವಲೆಪ್‌ಮೆಂಟ್ ಸೆಂಟರ್‌ನ ನಿರ್ದೇಶಕ ಡಾ.ವಿ.ಸಾಮ್ಯುಯೆಲ್ ರಾಜಕುಮಾರ್ ಅವರು ಸುಧಾಂಶು ದೊಡ್ಡಿ ಅವರನ್ನು ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.