ADVERTISEMENT

ಅಯೋಧ್ಯೆ ತೀರ್ಪಿಗೆ ಟ್ವೀಟಿಗರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:41 IST
Last Updated 9 ನವೆಂಬರ್ 2019, 10:41 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದಶಕಗಳಿಂದಲೂ ಬಗೆಹರಿಯದೆ ಉಳಿದಿದ್ದ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದ್ದು, ಬಹುತೇಕರು ತೀರ್ಪನ್ನು ಸ್ವಾಗತಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠದಿಂದ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಅಯೋಧ್ಯೆ ವಿಚಾರ ಮುನ್ನೆಲೆಗೆ ಬಂದಿದೆ. #AYODHYAVERDICT, #RamMandir, #AyodhyaJudgment, #JaiShriRam, #MandirwahiBanega ಗಳು ಟಾಪ್ ಟ್ರೆಂಡಿಂಗ್ ಆಗಿವೆ.

ಬಹುತೇಕ ಎಲ್ಲ ವರ್ಗದವರು ಸುಪ್ರೀಂ ತೀರ್ಪನ್ನು ಗೌರವಿಸಿ, ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದಷ್ಟುಸ್ವಾರಸ್ಯಕರಟ್ವೀಟ್‌ಗಳು ಇಲ್ಲಿವೆ ನೋಡಿ....

ADVERTISEMENT

ಪ್ರಧಾನಿ ನರೇಂದ್ರ ಮೋದಿಯವರ ಫೋಟೊವನ್ನು ಟ್ವೀಟ್ ಮಾಡುವ ಮೂಲಕ 2024ರ ಚುನಾವಣೆಯನ್ನು ಗೆದ್ದಿದ್ದಕ್ಕೆ ಅಭಿನಂದನೆಗಳು ಮೋದಿ ಜೀ... ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ಹೆಸರನ್ನು ನೆನಪಿಡಿ ಎಂದು ವಿವೇಕ್ ಎನ್ನುವರು ಟ್ವೀಟ್ ಮಾಡಿದ್ದಾರೆ.

ಪಿಯು ನಾಯರ್ ಎಂಬುವರು ಟ್ವೀಟ್ ಮಾಡಿ, ಕೇರಳದ ಶ್ರೇಷ್ಠ ಪುರಾತತ್ವಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್ ಸರ್ ಅವರ ಸಂಶೋಧನಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಟ್ಟು ಬಿಡದೆ ಹೋರಾಡಿದ ಈ ಪುರುಷರನ್ನು ನಾವು ಮರೆಯಬಾರದು ಎಂದಿರುವ ನೆಟ್ಟಿಗರೊಬ್ಬರು ಬಿಜೆಪಿ ಮುಖಂಡರಾದ ಮುರಳಿ ಮನೋಹರ್ ಜೋಷಿ ಮತ್ತು ಎಲ್ ಕೆ ಆಡ್ವಾಣಿ ಅವರ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಅಯೋಧ್ಯ ತೀರ್ಪಿನ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ಮಾಡಲಿದ್ದಾರೆ ಎಂದು ಐರಾನಿ ಮ್ಯಾನ್ ಎಂಬುವರು ಬರೆದುಕೊಂಡಿದ್ದಾರೆ.

ಇಡೀ ವಿಶ್ವದಲ್ಲೇ ಪರೀಕ್ಷೆಗೂ ಮುನ್ನ ಪಠ್ಯವನ್ನು ಮುಗಿಸಿದ ಏಕೈಕ ರಾಜಕೀಯ ವಿದ್ಯಾರ್ಥಿ ಎಂದರೆ ಅದು ಪ್ರಧಾನಿ ಮೋದಿ ಎಂದು ಅನ್ನಿಸುತ್ತಿದೆ. ಅದು ಐದು ವರ್ಷಕ್ಕೂ ಮುನ್ನವೇ ಎಂದು ಮತ್ತೊಬ್ಬರು ಅಯೋಧ್ಯೆ ತೀರ್ಪನ್ನು ಮೋದಿಗೆ ತಳುಕು ಹಾಕಿದ್ದಾರೆ.

ವಿಜಯೋತ್ಸವದ ಗುಂಗಿನಲ್ಲಿರುವ ಕ್ರಿಕೆಟಿಗ ರೋಹಿತ್ ಶರ್ಮಾರ ಫೋಟೊ ಹಂಚಿಕೊಂಡಿರುವ ನೆಟ್ಟಿಗರೊಬ್ಬರು ಅಯೋಧ್ಯೆ ತೀರ್ಪು ಕೇಳಿದ ನಂತರ ಜನ ಹೀಗಿದ್ದಾರೆ ಎಂದು ಹೇಳಿದ್ದಾರೆ.

ನಿರುದ್ಯೋಗ, ಮಹಿಳೆಯರ ರಕ್ಷಣೆ, ಆರ್ಥಿಕತೆ ಕುಸಿತ, ರೈತರ ಆತ್ಮಹತ್ಯೆ, ಆರೋಗ್ಯ ರಕ್ಷಣೆ, ಬಡತನ, ನವಜಾತ ಶಿಶುಗಳ ಸಾವು, ಮಾಲಿನ್ಯದ ಕುರಿತಾಗಿ ಕಾಳಜಿಯೇ ಇಲ್ಲದೆ ಧಾರ್ಮಿಕ ನಂಬಿಕೆಗಳ ಮೇಲೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆ ಮಟ್ಟಿಗೆ ಸರ್ಕಾರವು ದೇಶದ ಜನರ ತಲೆ ಕೆಡಿಸಿದೆ ಎಂದೊಬ್ಬರು ಗಂಭೀರ ಸಮಸ್ಯೆಗಳನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ತೀರ್ಪು ಏನೇ ಆಗಿದ್ದರೂ ಕೂಡ ನಾವೆಲ್ಲ ಭಾರತೀಯರು. ಜೈ ಹಿಂದ್ ಎಂದು ಮತ್ತೊಬ್ಬರು ಹಿಂದು ಮುಸ್ಲಿಂ ಚಿತ್ರವಿರುವ ಫೋಟೊ ಶೇರ್ ಮಾಡಿದ್ದಾರೆ.

ಇನ್ನಷ್ಟು ಟ್ವೀಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.