ADVERTISEMENT

ಸಮ್ಮತಿ ಸೂಚಿಸಲು ಹೆಣ್ಣುಮಕ್ಕಳಿಗಿರುವ ವಯಸ್ಸು ಇಳಿಕೆ ಅಪಾಯಕಾರಿ:ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 23:30 IST
Last Updated 24 ಜುಲೈ 2025, 23:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸಮ್ಮತಿ ಸೂಚಿಸಲು ಹೆಣ್ಣುಮಕ್ಕಳಿಗಿರುವ ಕನಿಷ್ಠ ವಯಸ್ಸಿನ ಮಿತಿಯಲ್ಲಿ ವಿನಾಯತಿ ನೀಡುವಂಥ ತಿದ್ದುಪಡಿಗಳನ್ನು ತರುವುದರಿಂದ ಕಾನೂನಿನ ಮೂಲ ಉದ್ದೇಶಕ್ಕೆ ಧಕ್ಕೆಯಾಗುವುದಲ್ಲದೇ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಅಸ್ತಿತ್ವದಲ್ಲಿರುವ ಸಮ್ಮತಿ ವಯಸ್ಸಿನ ಮಿತಿಯು ಹದಿಹರೆಯದ ವಯಸ್ಸಿನವರ ಪ‍್ರಬುದ್ಧತೆ, ಸಾಮರ್ಥ್ಯವನ್ನು ನಿರ್ಲಕ್ಷ್ಯಿಸಿ ಅವರ ನಡುವಿನ ಒಮ್ಮತದ ಸಂಬಂಧವನ್ನೂ ತಪ್ಪಾಗಿ ನಿರೂಪಿಸುತ್ತಿದೆ. ಹೀಗಾಗಿ ಸಮ್ಮತಿ ವಯಸ್ಸಿನ ಮಿತಿಯನ್ನು 18 ರಿಂದ 16 ವರ್ಷಕ್ಕೆ ಇಳಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. 

ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರ ಮೂಲಕ ಪ್ರತಿಕ್ರಿಯೆ ಸಲ್ಲಿಸಿದೆ. 

ADVERTISEMENT

‘ಮಕ್ಕಳು ದೈಹಿಕವಾಗಿ ಪ್ರಬುದ್ಧರಾಗಿದ್ದರೂ ಸಹ ಸಾಮಾಜಿಕ ರೂಢಿಗಳು ಅಥವಾ ಆರ್ಥಿಕ ದುರ್ಬಲತೆಯ ಕಾರಣದಿಂದ ಎದುರಾಗುವ ಸವಾಲುಗಳನ್ನು ನಿಭಾಯಿಸುವಲ್ಲಿ ಅಸಮರ್ಥರಾಗಿರುತ್ತಾರೆ ಹೀಗಾಗಿ ಸಮ್ಮತಿ ವಯಸ್ಸಿನ ಮಿತಿಯನ್ನು ಇಳಿಸುವುದು ಸೂಕ್ತವಲ್ಲ. ಅಲ್ಲದೇ, ಮಿತಿಯ ತಿದ್ದುಪಡಿಯು ಪೋಕ್ಸೊ ಕಾಯ್ದೆ –2012 ಅನ್ನೂ ದುರ್ಬಲಗೊಳಿಸುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.