ADVERTISEMENT

ಚಿಕಿತ್ಸಾ ವೆಚ್ಚ ರದ್ದು: ಸುಪ್ರೀಂಕೋರ್ಟ್‌ನಿಂದ ಅರ್ಜಿ ವಜಾ

ಪಿಟಿಐ
Published 21 ಏಪ್ರಿಲ್ 2020, 19:12 IST
Last Updated 21 ಏಪ್ರಿಲ್ 2020, 19:12 IST
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)   

ನವದೆಹಲಿ: ಕೋವಿಡ್‌–19 ಹೊರತುಪಡಿಸಿ, ಉಳಿದೆಲ್ಲಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ರದ್ದುಗೊಳಿಸಲು ಅಥವಾ ರಿಯಾಯಿತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

‘ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ಸ್ಥಗಿತವಾಗಿದೆ, ಜೀವನೋಪಾಯಕ್ಕೆ ದಾರಿಯಿಲ್ಲದಾಗಿದೆ. ಭವಿಷ್ಯಕ್ಕಾಗಿ ಕೂಡಿಟ್ಟ ಹಣವೂ ಆಹಾರ, ದಿನನಿತ್ಯದ ಖರ್ಚಿಗೆ ಬಳಸಲಾಗುತ್ತಿದೆ. ಹಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನ ಕಾಯುತ್ತಿದ್ದಾರೆ. ಹೀಗಾಗಿ ಇವುಗಳ ಚಿಕಿತ್ಸಾ ವೆಚ್ಚವನ್ನು ರದ್ದುಗೊಳಿಸಲು ಅಥವಾ ವಿನಾಯಿತಿ ನೀಡಲು ಎಲ್ಲ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳು, ಕ್ಲಿನಿಕ್‌ಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಆದೇಶಿಸುವಂತೆ ನಿರ್ದೇಶನ ನೀಡಬೇಕು’ ಎಂದು ವಕೀಲರಾದ ಸೌರ್ಜ್ಯ ದಾಸ್‌ ಅರ್ಜಿ ಸಲ್ಲಿಸಿದ್ದರು.

ಮುಖಗವಸು, ಸ್ಯಾನಿಟೈಸರ್‌ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿನಾಯಿತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನೂ ಪೀಠ ತಿರಸ್ಕರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.