ADVERTISEMENT

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ 12 ವರ್ಷದ ಬಳಿಕ ಜೈಲಿನಿಂದ ಬಿಡುಗಡೆ

ಪಿಟಿಐ
Published 8 ಸೆಪ್ಟೆಂಬರ್ 2023, 13:47 IST
Last Updated 8 ಸೆಪ್ಟೆಂಬರ್ 2023, 13:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು 12 ವರ್ಷದ ಬಳಿಕ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2005ರಲ್ಲಿ ಕೃತ್ಯ ನಡೆದಾಗ ಈತ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ವಯಸ್ಕನಾಗಿದ್ದ ಎಂಬ ಆಧಾರದಲ್ಲಿ ಬಿಡುಗಡೆಗೆ ಆದೇಶಿಸಿದೆ. 

ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರಿದ್ದ ಪೀಠವು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮೇ 2023ರ ವರದಿಯಲ್ಲಿ ಬಂಧಿತನ ಜನ್ಮದಿನಾಂಕ 1989ರ ಮೇ 2 ಎಂದಿರುವುದನ್ನು ಉಲ್ಲೇಖಿಸಿದರು.

ಆ ಪ್ರಕಾರ, ಕೊಲೆ ನಡೆದಿದ್ದ ದಿನವಾದ ಡಿಸೆಂಬರ್ 21, 2005ರಂದು ಆತನ ವಯಸ್ಸು 16 ವರ್ಷ, ಏಳು ತಿಂಗಳು. ಆ ಪ್ರಕಾರ, ಆತ ಕಾನೂನು ಸಂಘರ್ಷಕ್ಕೆ ಗುರಿಯಾಗಿದ್ದ ಬಾಲಕ ಎಂದು ‍ಪೀಠ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಸಂಜಯಕುಮಾರ್‌ ಅವರು ಸದಸ್ಯರಾಗಿರುವ ಪೀಠವು ಈ ಸಂಬಂಧ ಸೆಪ್ಟೆಂಬರ್ 5ರಂದು ಆದೇಶ ನೀಡಿದೆ.

ADVERTISEMENT

‘ನಾನು ಕಾನೂನು ಸಂಘರ್ಷಕ್ಕೆ ಗುರಿಯಾಗಿದ್ದ ಬಾಲಕ’ ಎಂಬ ಅರ್ಜಿದಾರರ ಪ್ರತಿಪಾದನೆ ಪರಿಶೀಲಿಸಲು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಬಾಲಾಪರಾಧಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 200ರ ಅನ್ವಯ ಗರಿಷ್ಠ 3 ವರ್ಷ ಪೊಲೀಸ್ ವಶದಲ್ಲಿ ಇರಬೇಕಿತ್ತು.

ಅರ್ಜಿದಾರರು ಈಗಾಗಲೇ 12 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರ ವರದಿಯನ್ನು ಒಪ್ಪಿಕೊಳ್ಳುತ್ತಾ, ರಿಟ್‌ ಅರ್ಜಿಯನ್ನು ಅಂಗೀಕರಿಸಲಾಗಿದೆ. ಅರ್ಜಿದಾರರ ಬಿಡುಗಡೆಗೆ ಆದೇಶಿಸಿದೆ ಎಂದು ಪೀಠ ತಿಳಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.